ನ್ಯೂಸ್

ಜಾನುವಾರು ತಪ್ಪಿಸಲು ಹೋಗಿ ಸರಣಿ ಅಪಘಾತ; 7 dead, 14 injured

ಅಹಮದಾಬಾದ್: ರಸ್ತೆಯಲ್ಲಿದ್ದ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ಸೊಂದು ಮೂರು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟು. 14 ಜನರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್​ನ ದ್ವಾರಕಾದಲ್ಲಿ ನಡೆದಿದೆ.

ಮೃತರನ್ನು ಗಾಂಧಿನಗರದ ಹೆತಲ್‌ಬೆನ್ ಠಾಕೋರ್ (25), ತಾನ್ಯಾ (2), ರಿಯಾನ್ಸ್ (3), ವಿಷನ್ (7), ಪ್ರಿಯಾಂಶಿ (13), ಭಾವನಾಬೆನ್ ಠಾಕೋರ್ (35), ಮತ್ತು ಚಿರಾಗ್ ರಾಣಾಭಾಯ್ (25) ಎಂದು ಗುರುತಿಸಲಾಗಿದೆ. ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿಲ್ಲ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿ ರವಿಕಾಂತ್ , ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ಬಸ್ಸನ್ನು ಅಡ್ಡಾದಿಡ್ಡಿ ಚಲಾಯಿಸಿದ್ದು, ಎದುರು ದಿಕ್ಕಿನಿಂದ ಬರುತ್ತಿದ್ದ ಮಿನಿವ್ಯಾನ್, ಕಾರು ಮತ್ತು ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, 14 ಜನ ಮೃತಪಟ್ಟಿದ್ದಾರೆ.

ಮೃತರಲ್ಲಿ ಆರು ಮಂದಿ ಮಿನಿವ್ಯಾನ್‌ನಲ್ಲಿದ್ದರೆ, ಒಬ್ಬರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮಿನಿವ್ಯಾನ್ ಗಾಂಧಿನಗರದಿಂದ ದ್ವಾರಕಾಗೆ ತೆರಳುತ್ತಿತ್ತು ಮತ್ತು ಅಪಘಾತ ಸಂಭವಿಸಿದಾಗ ಅದರ ಗಮ್ಯಸ್ಥಾನದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಗಾಯಾಳುಗಳನ್ನು ದ್ವಾರಕಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ರವಿಕಾಂತ್ ತಿಳಿಸಿದ್ದಾರೆ.