ಲಖನೌ: ಹಿಂದಿ ಭಾಷೆಯ ಹಾರ್ಟ್‌ಲ್ಯಾಂಡ್ ಎಂದೇ ಹೆಸರುವಾಸಿಯಾಗಿರುವ ಹಿಂದಿ ರಾಜ್ಯ ಉತ್ತರಪ್ರದೇಶದಲ್ಲಿ 10 ಮತ್ತು 12ನೇ ತರಗತಿಯ 7.97 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ.
ಉತ್ತರ ಪ್ರದೇಶ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಕಾರ, 2.70 ಲಕ್ಷ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದರೆ, ಹೈಸ್ಕೂಲ್‌ನಲ್ಲಿ ಇವರ ಸಂಖ್ಯೆ 5.28 ಲಕ್ಷ! ಪ್ರೌಢ ಹಾಗೂ ಮಾಧ್ಯಮಿಕ ಶಾಲೆಯ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಸುಮಾರು 55 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಮಂಡಳಿಯ ಅಂಕಿಅಂಶದ ಪ್ರಕಾರ ಸುಮಾರು 2.39 ಲಕ್ಷ ವಿದ್ಯಾರ್ಥಿಗಳು ಹಿಂದಿ ಪರೀಕ್ಷೆಗೆ ಹಾಜರಾಗಿಯೇ ಇಲ್ಲ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ|ಮುಗಿಯಿತು ಗಣಿತ ಆತಂಕ ಅಗಣಿತ
ಹಿಂದಿ ಮಾತೃಭಾಷೆ ರಾಜ್ಯದಲ್ಲಿಯೇ ಇಂಥ ಪರಿಸ್ಥಿತಿ ಬಂದಿರುವುದು ಇದೀಗ ರಾಜಕೀಯ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆದರೆ ಇದಕ್ಕೆ ಪಾಲಕದಲ್ಲಿ ಅತಿಯಾಗಿ ಇಂಗ್ಲಿಷ್ ವ್ಯಾಮೋಹ ತುಂಬಿರುವುದೇ ಹಿಂದಿಯತ್ತ ನಿರ್ಲಕ್ಷ್ಯಕ್ಕೆ ಕಾರಣ ಎನ್ನುತ್ತಿದೆ ಸರ್ಕಾರ. ಮನೆಯಲ್ಲಿ ಕೂಡ ಮಕ್ಕಳು ಮಾತೃಭಾಷೆ ಹಿಂದಿನ್ನು ಮಾತನಾಡಲು ಪಾಲಕರು ಬಿಡುತ್ತಿಲ್ಲ. ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು ಎನ್ನುತ್ತಿದ್ದಾರೆ. ಇದರಿಂದಾಗಿಯೇ ಇಂಥ ಸಮಸ್ಯೆ ಬಂದಿದೆ ಎನ್ನುವುದು ಆರೋಪ.
2019ರಲ್ಲಿ 10 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು, ಅದಕ್ಕೆ ಹೋಲಿಸಿದರೆ ಈ ಬಾರಿ ಸಂಖ್ಯೆ ಕೊಂಚ ಕಡಿಮೆ ಎನ್ನಲಾಗಿದೆ.