ನಗರದ ಬೋಗಾದಿಯ ಎಸ್‌ಬಿಎಂ ಕಾಲನಿಯ ನಿವಾಸಿ ಲತಾಶೇಖರ್ ಮನೆಯ ಹಿಂಬದಿಯ ಕಿಟಕಿ ಮೀಟಿ ಒಳ ನುಗ್ಗಿರುವ ಕಳ್ಳರು, 7.24 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳುವು ಮಾಡಿದ್ದಾರೆ.
ಲತಾ ಶೇಖರ್ ಅವರು ತಮ್ಮ ಅಳಿಯ ಹಾಗೂ ಮಗಳ ಜೊತೆ ಪ್ರವಾಸಕ್ಕೆ ತೆರಳಿದ ವೇಳೆ ಈ ಕೃತ್ಯ ನಡೆದಿದೆ. ಜ.10 ರಂದು ಉಡುಪಿ ಕಡೆಗೆ ಪ್ರವಾಸ ತೆರಳಿದ್ದರು. 12 ರಂದು ಅವರು ವಾಪಸ್ಸಾಗಿದ್ದಾರೆ. ಈ ವೇಳೆ ಮನೆಯ ಒಳಗೆ ತೆರಳಿದ ವೇಳೆ ಕೊಠಡಿಯ ಬೀರು ತೆರೆದಿರುವುದು ಕಂಡುಬಂದಿದ್ದು, ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ ಕಳವಾಗಿದೆ ಎಂದು ದೂರು ನೀಡಿದ್ದು, ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.