ನ್ಯೂಸ್

6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಅಂಗನವಾಡಿ ಕಾರ‌್ಯಕರ್ತೆಯರ ಪ್ರತಿಭಟನೆ


ಶಿಶುಪಾಲನಾ ಕೇಂದ್ರ, ಶಾಲಾ ಪೂರ್ವ ಶಿಕ್ಷಣ ಶಾಲೆಗಳ ಸ್ಥಾಪನೆಗೆ ವಿರೋಧ ಜಿಲ್ಲಾದ್ಯಂತ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಅಂಗನವಾಡಿ ಕೇಂದ್ರಗಳಿರುವೆಡೆ ರಾಜ್ಯದ ವಿವಿಧ ಇಲಾಖೆಗಳ, ಶಿಶುಪಾಲನಾ ಕೇಂದ್ರ ಮತ್ತು ಶಾಲಾಪೂರ್ವ ಶಿಕ್ಷಣ ಶಾಲೆಗಳ ಸ್ಥಾಪನೆಯನ್ನು ವಿರೋಧಿಸಿ ಹಾಗೂ ಗೌರವಧನ ಹೆಚ್ಚಳದ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಅಂಗನವಾಡಿ ಕಾರ‌್ಯಕರ್ತೆಯರ ಮತ್ತು ಸಹಾಯ ಕಿಯರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿದರು.
ರಾಜ್ಯ ಅಂಗನವಾಡಿ ಕಾರ‌್ಯಕರ್ತೆಯರ ಮತ್ತು ಸಹಾಯಕಿಯರ ಫೇಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ,ಫೆಡರೇಷನ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಕಾರ‌್ಯಕರ್ತೆಯರು,ಸಹಾಯಕಿಯರು ಡಿಸಿ ಕಚೇರಿ ಬಳಿ ಧರಣಿ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಸ್ಥಾಪಿಸಿರುವ ಅಂಗನವಾಡಿಗಳ ಮೂಲಕ ಮಕ್ಕಳ ಆರೋಗ್ಯ,ಲಾಲನೆ-ಪಾಲನೆ,ಪೌಷ್ಠಿಕ ಆಹಾರ, ಶಾಲಾಪೂರ್ವ ಶಿಕ್ಷಣ ಮೊದಲಾದ ಸೇವೆಗಳನ್ನು ಒದಗಿಸಲಾಗುತ್ತಿದೆ. ಆದರೆ ರಾಜ್ಯಸರ್ಕಾರದ ವಿವಿಧ ಇಲಾಖೆಗಳು, ಅಂಗನ ವಾಡಿಗಳಿರುವ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರ,ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಕ್ಕೆ ಮುಂದಾಗಿರುವುದು ಅಂಗನವಾಡಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ನರೇಗಾದಡಿ ಗ್ರಾಪಂ ವ್ಯಾಪ್ತಿಗಳಲ್ಲಿ ಶಿಶುಪಾಲನಾ ಕೇಂದ್ರಗಳ ಪ್ರಾರಂಭಕ್ಕೆ ಸಿದ್ಧತೆ ನಡೆದಿದ್ದು,ಇದರಿಂದ ಅಂಗನವಾಡಿಗಳಿಗೆ ಬರುವಂಥ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ ಅಥವಾ ಮಕ್ಕಳು ಬಾರದೆ ಇವುಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.
ರಾಜ್ಯವಿಧಾನಸಭಾ ಚುನಾವಣೆ ಪೂರ್ವ,ಕಾಂಗ್ರೆಸ್ ಪ್ರಕಟಿಸಿದ್ದ ಗೌರವಧನ ಹೆಚ್ಚಳ ಹಾಗೂ ನಿವೃತ್ತರಿಗೆ ಇಡುಗಂಟು 3 ಲಕ್ಷ ರೂ. ಗ್ಯಾ ರಂಟಿಯನ್ನು ರಾಜ್ಯಸರ್ಕಾರ ಜಾರಿಗೊಳಿಸಬೇಕು. ಶಿಶುಪಾಲನಾ ಕೇಂದ್ರಗಳು,ಪೂರ್ವ ಪ್ರಾಥಮಿಕ ಶಾಳೆಗಳ ಪ್ರಾರಂಭಿಸುವ ಆದೇಶ ಗಳನ್ನು ಹಿಂಪಡೆಯಬೇಕು.
ಅಂಗನವಾಡಿ ಕೇಂದ್ರಗಳಲ್ಲೇ ಶಾಲಾಪೂರ್ವ ತರಗತಿಗಳಿಗೆ ಸವಲತ್ತುಗಳನ್ನು ಒದಗಿಸಬೇಕು,10ತಿಂಗಳಿಂದ ಬಾಕಿ ಇರುವ ಅಂಗನ ವಾಡಿ ಕಟ್ಟಡಗಳ ಬಾಡಿಗೆ ಹಾಗೂ 9 ತಿಂಗಳಿಂದ ಬಾಕಿ ಇರುವ ಅಡುಗೆ ಅನಿಲದ ಮೊತ್ತ ಬಿಡುಗಡೆಗೊಳಿಸಬೇಕು. ಬಿಎಲ್‌ಒ ಕೆಲಸದಿಂ ದ ಕಾರ‌್ಯಕರ್ತೆಯರನ್ನು ಮುಕ್ತಗೊಳಿಸಬೇಕೆಂದು ಒತ್ತಾಯಿಸಿದರು.
ಎಐಟಿಯುಸಿ ರಾಜ್ಯಉಪಾಧ್ಯಕ್ಷ ಟಿ.ಆರ್.ಉಮಾಪತಿ,ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು,ತಾಲೂಕು ಅಧ್ಯಕ್ಷ ಬಿ.ಬ ಸವರಾಜಪ್ಪ,ಫೆಡರೇಷನ್ ಜಿಲ್ಲಾಧ್ಯಕ್ಷೆ ಭಾಗ್ಯಮ್ಮ,ಉಪಾಧ್ಯಕ್ಷೆ ಜಮುನಾಬಾಯಿ,ಕಾರ‌್ಯದರ್ಶಿ ಸಾವಿತ್ರಮ್ಮ,ಇ ಸತ್ಯಕೀರ್ತಿ,ರಾಧಮ್ಮ ಎಂ.ಬಿ. ಜಯದೇವಮೂರ್ತಿ ಮತ್ತಿತರರು ಇದ್ದರು.