ನವದೆಹಲಿ: ಕರ್ನಾಟಕದ ನಾಲ್ಕು ಹಾಗೂ 9 ಕೇಂದ್ರ ಸಚಿವರ ಸಹಿತ ರಾಜ್ಯಸಭೆಯ 68 ಸದಸ್ಯರು 2024ರಲ್ಲಿ ನಿವೃತ್ತರಾಗಲಿದ್ದಾರೆ. ಹೀಗಾಗಿ ಸಂಸತ್ತಿನ ಮೇಲ್ಮನೆಯನ್ನು ಪ್ರವೇಶಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರ ನಡುವೆ ತುರುಸಿನ ಸ್ಪರ್ಧೆ ಆರಂಭವಾಗಿದೆ.
9 ಕೇಂದ್ರ ಸಚಿವರ ಸಹಿತ ಒಟ್ಟು 68 ಮೇಲ್ಮನೆ ಸದಸ್ಯರ ಅವಧಿ ಈ ವರ್ಷ ಮುಕ್ತಾಯವಾಗಲಿದೆ. ದೆಹಲಿಯ ಮೂರು ಮತ್ತು ಸಿಕ್ಕಿಂನ ಒಂದು ರಾಜ್ಯಸಭೆ ಸ್ಥಾನದ ಚುನಾವಣೆಯನ್ನು ಆಗಲೇ ಪ್ರಕಟಿಸಲಾಗಿದೆ.
ಈ ವರ್ಷ ರಾಜ್ಯಸಭೆಯಿಂದ ನಿವೃತ್ತರಾಗುವ ಪ್ರಮುಖರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಸೇರಿದ್ದಾರೆ. ಸಚಿವರಾದ ಅಶ್ವಿನಿ ವೈಷ್ಣವ್, ಧಮೇರ್ಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಮನಸುಖ್ ಮಾಂಡವೀಯ ಮೇಲ್ಮನೆಯಿಂದ ನಿವೃತ್ತರಾಗುವ ಸಚಿವರಲ್ಲಿ ಕೆಲವರು.