ನ್ಯೂಸ್

ಹಾಲಿವುಡ್​ ನಟ ಕೀನು ರೀವ್ಸ್​ ಎಂದು ಹೇಳಿ ಅಪರಿಚಿತ ಮಹಿಳೆಗೆ 65 ಸಾವಿರ ರೂ. ವಂಚನೆ| Keanu Reeves

Keanu Reeves: ಹಾಲಿವುಡ್ ನಟ ಕೀನು ರೀವ್ಸ್ ಎಂದು ಹೇಳಿ ಮಹಿಳಾ ಅಭಿಮಾನಿಯೊಬ್ಬರಿಂದ (69) 65,000 ರೂ ವಂಚಿಸಿರುವ ಘಟನೆ ಮುಂಬೈನಲ್ಲಿ ಇತ್ತೀಚೆಗೆ ನಡೆದಿದೆ.

ಹಾಲಿವುಡ್ ನಟ ಕೀನು ರೀವ್ಸ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಕಾಮತ್ ಅವರನ್ನು ಸಂಪರ್ಕಿಸಿ, ಆಕೆಯೊಂದಿಗೆ ಇನ್​​ಸ್ಟಾಗ್ರಾಮ್​, ಟೆಲಿಗ್ರಾಮ್ ಮೂಲಕ ಚಾಟ್​ ಮಾಡಲು ಪ್ರಾರಂಭಿಸಿದ್ದು, ಆಕೆಯನ್ನು ಭೇಟಿಯಾಗಲು ಮುಂಬೈಗೆ ಬರುವಂತೆ ತಿಳಿಸಿದ್ದಾಳೆ. ಇನ್ನು ನಾನು ಭಾರತಕ್ಕೆ ಬಂದಾಗ ಭಾರತೀಯ ಕರೆನ್ಸಿ ಬೇಕು ಎಂದು ಹೇಳಿ ಆಕೆಯಿಂದ ತನ್ನ ​ಐಡಿಬಿಐ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸುವಂತೆ ತಿಳಿಸಿದ್ದಾನೆ. ಈ ವೇಳೆ ಮಹಿಳೆ 65,000 ರೂಗಳನ್ನು ಆತನ ಅಕೌಂಟ್​ಗೆ ವರ್ಗಾಹಿಸಿದ್ದಾಳೆ.

ಕಾಮತ್​ ಅವರ ಮಗಳ ಮೊಬೈಲ್​ಗೆ ಹಣ ವರ್ಗಾವಣೆಯ ಸಂದೇಶ ಬಂದಿದ್ದು, ಹಣವನ್ನು ಡೆಹ್ರಾಡೂನ್ ಮೂಲದ ಬ್ಯಾಂಕಿನಲ್ಲಿರುವ ನಹರ್ ಎಂಬ ವ್ಯಕ್ತಿಯ ಖಾತೆಗೆ ವರ್ಗಾಯಿಸಲಾಗಿರುವುದು ಕಂಡು ಬಂದಿದೆ. ಈ ಕುರಿತು ತಾಯಿಯನ್ನು ವಿಚಾರಿಸಿದಾಗ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಆಗ ಕಾಮತ್​ ವಂಚನೆಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ದಾಖಲು

ಘಟನೆ ಬಗ್ಗೆ ಎಚ್ಚೆತ್ತುಕೊಂಡ ಕಾಮತ್​ ಮಗಳು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ವಂಚಕನು ಕೀನು ರೀವ್ಸ್​ ಎಂದು ಹೇಳಿಕೊಂಡು ನನ್ನ ತಾಯಿಯಿಂದ 65,000 ರೂಗಳನ್ನು ಆತನ ಬ್ಯಾಂಕ್​ ಖಾತೆಗೆ ಜಮಾಯಿಸಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ.

ವರ್ಸೋವಾ ಪೊಲೀಸರು ಕೀನು ರೀವ್ಸ್ ಅವರಂತೆ ನಟಿಸಿ ಮಹಿಳೆಗೆ ಮೋಸ ಮಾಡಿದ ಆರೋಪದ ಮೇಲೆ ವಂಚಕನ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)