ಅಲ್ವಾರ್: ಬಿಸಿಲ ಧಗೆಯಿಂದ ಬಸವಳಿದ ಅರವತ್ತೈದು ಮಕ್ಕಳು ಕುಲ್ಫಿ ಸೇವಿಸಿ ಅಸ್ವಸ್ಥರಾಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ಒಡಿಶಾ ರೈಲು ದುರಂತದಿಂದ ಬಚಾವ್ ಆಗಿದ್ದ ಚಿಕ್ಕಮಗಳೂರಿನ ಯಾತ್ರಿಕ ಹೃದಯಾಘಾತದಿಂದ ಸಾವು
ರಾಜ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಖುರ್ದ್ ಗ್ರಾಮದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಐಸ್ ಕ್ರೀಮ್ ಮಾರಾಟಗಾರರಿಂದ ಕುಲ್ಫಿ ಸೇವಿಸಿದ ನಂತರ ಮಕ್ಕಳು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲತೊಡಗಿದರು. ಕೂಡಲೇ ಸ್ಥಳೀಯರು ಮಕ್ಕಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು.
ಅಲ್ವಾರ್, ಬಂಡಿಕುಯಿ ಮತ್ತು ರಾಜ್‌ಗಢದ ಆಸ್ಪತ್ರೆಗಳಿಗೆ ಮಕ್ಕಳನ್ನು ದಾಖಲಿಸಲಾಗಿದ್ದು 50 ಮಕ್ಕಳಿಗೆ ಪ್ರಾಥಮಿಕಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿ ಕೊಡಲಾಯಿತು. ಉಳಿದ 15 ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿರುವುದರಿಂದ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ರಸ್ತೆ ಬದಿ ಮಾರಾಟಗಾರರಿಂದ ಕುಲ್ಫಿ ತಿಂದ ನಂತರ ಈ ಘಟನೆ ಸಂಭವಿಸಿದ್ದು, ಇದರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕ ಘಟನೆಯ ನಿಖರ ಕಾರಣ ಗೊತ್ತಾಗಲಿದೆ ಎಂದು ಅಲ್ವಾರ್ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ.(ಏಜೆನ್ಸೀಸ್)