ನ್ಯೂಸ್

ಮಧ್ಯಪ್ರದೇಶದಲ್ಲಿ 64 ತಬ್ಲಿಘಿ ಸದಸ್ಯರ ಬಂಧನ

vinaymk1969

ಭೋಪಾಲ್: ವೀಸಾ ನಿಯಮ ಉಲ್ಲಂಘಿಸಿದ ತಬ್ಲಿಘಿ ಜಮಾತ್​ನ 64 ವಿದೇಶಿ ಸದಸ್ಯರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಇವರ ವಿರುದ್ಧ ಭೋಪಾಲ್​ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ಜಮಾತ್ ಸದಸ್ಯರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ಕಜಕಿಸ್ತಾನ, ತಾಂಜೇನಿಯಾ, ದಕ್ಷಿಣ ಆಫ್ರಿಕಾ, ಮ್ಯಾನ್ಮಾರ್ ಸೇರಿ ಹಲವು ದೇಶಗಳ ಪ್ರಜೆಗಳಿದ್ದಾರೆ. ಈ 64 ಜನರು ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರೋ ಇಲ್ಲವೋ ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಪ್ರವಾಸಿ ವೀಸಾಗಳಲ್ಲಿ ಭಾರತಕ್ಕೆ ಆಗಮಿಸುವವರು ಇಲ್ಲಿನ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ.