ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಮತ್ತು ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಚಿತ್ರಾ ಪೂರ್ಣಿಮಾ ಮತ್ತು ಇತರರಿಗೆ ಸೇರಿದ 62.05 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅನ್ವಯ ಇಂದಿರಾನಗರದ ಸ್ಥಿರಾಸ್ತಿ ಮತ್ತು ಆರೋಪಿಗಳ ಹೆಸರಿನಲ್ಲಿ ಇದ್ದ 2.63 ಕೋಟಿ ರೂ. ಮೌಲ್ಯದ ಸ್ಥಿರ ಠೇವಣಿ ಸೇರಿ 62.05 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ಮತ್ತು ವಂಚನೆ ಸಂಬಂಧ ಇಂದಿರಾನಗರ ಮತ್ತು ಅಶೋಕನಗರ ಪೊಲೀಸ್ ಠಾಣೆಗಳಲ್ಲಿ ಹಾಗೂ ಬಿಎಂಟಿಎ್ನಲ್ಲಿ ಎ್ಐಆರ್ ದಾಖಲಾಗಿತ್ತು.
ತನಿಖೆ ವೇಳೆ ದಿವಂಗತ ಜಾರ್ಜ್ ತಂಗಯ್ಯ, ಇಂದಿರಾನಗರದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ನಿತೇಶ್ ಇಂದಿರಾನಗರ ರೀಟೇಲ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕಾಗಿ ಡೆವಲಪರ್‌ನಿಂದ 105.50 ಕೋಟಿ ರೂ. ಪಡೆದಿದ್ದ ತಂಗಯ್ಯ, ಸರ್ಕಾರಿ ಜಮೀನು ಸಹ ಒತ್ತುವರಿ ಮಾಡಿದ್ದರು.
ಡೆವಲಪರ್‌ನಿಂದ ಪಡೆದ ಹಣವನ್ನು ತಂಗಯ್ಯ, ತನ್ನ ಪತ್ನಿ, ಮಗಳು ಮತ್ತು ಮಗನಿಗೆ ಉಡುಗೊರೆ ಮತ್ತು ಸಂಬಳ ರೂಪದಲ್ಲಿ, ವಿದೇಶಿ ಪ್ರವಾಸ ವೆಚ್ಚಗಳು, ಶಾಪಿಂಗ್, ತೆರಿಗೆ ಹೊಣೆಗಾರಿಕೆಗೆ ಪಾವತಿ ನೆಪದಲ್ಲಿ ಹಣ ವರ್ಗಾವಣೆ ಮಾಡಿ ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.