ನ್ಯೂಸ್

ಕಾಂಗ್ರೆಸ್ ಸರ್ಕಾರದ 60 ಪರ್ಸೆಂಟ್ ಆರೋಪ; ಕುಮಾರಸ್ವಾಮಿಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು|60 percent blame on the Congress government

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ 60 ಪರ್ಸೆಂಟ್ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ(60 percent blame on Congress government; Minister M. B. Patil's attack on Kumaraswamy) ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಸೋಲಿನ ಹತಾಶೆ ಕುಮಾರಸ್ವಾಮಿಗೆ ಕಾಡುತ್ತಿದೆ. ಹಾಗಾಗಿ ಅವರು ಸುಮ್ಮನೆ ಹಿಟ್ ಆಂಡ್ ರನ್ ಮಾಡುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಸಂಕ್ರಾಂತಿ ನಂತರ ಅವರ ಪಕ್ಷದಲ್ಲೇ ಕೆಲವರು ಇರುವುದಿಲ್ಲ ಅನಿಸುತ್ತದೆ. ಅದಕ್ಕೆ ಅವರು ಹತಾಶರಾಗಿದ್ದಾರೆ. ಗುತ್ತಿಗೆದಾರರ ಅಸಮಾಧಾನ ಎನ್ನುತ್ತಾರೆ. ಯಾರು ಗುತ್ತಿಗೆದಾರರು ಅಸಮಾಧಾನರಾಗಿದ್ದಾರೆ. ಅಂತವರ ಲಿಸ್ಟ್ ಕೊಡಲಿ, ನಾವು ಕ್ರಮ ಜರುಗಿಸ್ತೇವೆ ಎಂದು ಹೇಳಿದರು. ಸುಮ್ಮನೆ ಹಿಟ್ ಆಂಡ್ ರನ್ ಸರಿಯಲ್ಲ. ಪ್ರಿಯಾಂಕ್ ಖರ್ಗೆ ವಿಚಾರದಲ್ಲೂ ಏನು ಮಾಡಿದರು? ಸಚಿನ್ ಗುತ್ತಿಗೆದಾರರ ಹೌದೋ ಅಲ್ಲವೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಅಂತಹದ್ದೇನಿಲ್ಲ. ನಿಖಿಲ್ ಕುಮಾರಸ್ವಾಮಿ ಯುವಕರು. ಅವರ ಸೋಲಿನ ಹತಾಶೆ ಹಾಗೆ ಮಾತನಾಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಬಿನೆಟ್ ಮುಂದೆ ಬರಲಿ

ಜಾತಿ ಜನಗಣತಿ ವರದಿ ಅನುಷ್ಠಾನ ವಿಚಾರ ಚರ್ಚೆಗೆ ಬರಲಿ ಬಳಿಕ ಮಾತನಾಡುತ್ತೇನೆ. ಇನ್ನೂ ಚರ್ಚೆಗೆ ಬಂದಿಲ್ಲ. ಅದರೊಳಗೇನಿದೆ ಯಾರಿಗೂ ಗೊತ್ತಿಲ್ಲ. ಗೊತ್ತಿಲ್ಲದೆ ಮಾತನಾಡುವುದು ಸರಿಯಲ್ಲ. ಮೊದಲು ಕ್ಯಾಬಿನೆಟ್ ಮುಂದೆ ಬರಲಿ, ತರುವಾಯ ಸ್ವಾಮೀಜಿಗಳ ಅಸಮಾಧಾನ ಬಗ್ಗೆ ಮಾತನಾಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರಕ್ಕೆ ನಾವು ಪತ್ರ ಬರೆದಿದ್ದೇವೆ

ಉಕ್ಕು ಕಾರ್ಖಾನೆ ಬಗ್ಗೆ ರಾಜ್ಯ ಸರ್ಕಾರ ಪತ್ರ ಬರೆದಿಲ್ಲ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ಕೇಂದ್ರಕ್ಕೆ ನಾವು ಪತ್ರ ಬರೆದಿದ್ದೇವೆ. ಎಲ್ಲ ಕಂಪನಿಗಳನ್ನೂ ಗುಜರಾತ್‌ಗೆ ಕರೆದುಕೊಳ್ಳುತ್ತಿದ್ದಾರೆ. ಅವರು ಇನ್ಸೆಂಟಿವ್ ಜಾಸ್ತಿ ಕೊಡುತ್ತಾರೆ. ಹಾಗಾಗಿ ಎಲ್ಲವೂ ಗುಜರಾತ್‌ಗೆ ಹೋಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರವಿ ಯಾರ ಬಗ್ಗೆ ಪತ್ರ ಬರೆದಿದ್ದಾರೆ?

ಮಾನವಹಕ್ಕು ಆಯೋಗಕ್ಕೆ ಸಿ.ಟಿ. ರವಿ ಪತ್ರ ಬರೆದಿರುವ ಕುರಿತ ಪ್ರಶ್ನೆಗೆ, ಯಾರ ಮೇಲೆ ಬರೆದಿದ್ದಾರೆ ಗೊತ್ತಿಲ್ಲ. ಸಿ.ಟಿ. ರವಿಯವರು ಸಚಿವೆ ಹೆಬ್ಬಾಳ್ಕರ್ ಬಗ್ಗೆ ಮಾತನಾಡಿದ್ದು ಸರಿಯೆ? ನೀವೇ ಹೇಳಿ?

ಹಲ್ಲೆ ಆಗಿದೆ ಎನ್ನುವುದು ತನಿಖೆ ಆಗುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದೆ, ಆಮೇಲೆ ಅದರ ಬಗ್ಗೆ ಮಾತನಾಡೋಣ ಎಂದು ಎಂ.ಬಿ.ಪಾಟೀಲ ಹೇಳಿದರು.