ನ್ಯೂಸ್

ಪ್ರಿಯತಮೆಯ ಓಲೈಕೆಗಾಗಿ ಆಕೆಯ ಮಗುವನ್ನೇ ಕೊಂದು ಮೂಟೆಕಟ್ಟಿ ಎಸೆದ ಪ್ರಿಯಕರ! ಬೆಚ್ಚಿಬೀಳಿಸುತ್ತೆ ಈ ಕೃತ್ಯ

ಚಿಕ್ಕಬಳ್ಳಾಪುರ: ಅಮ್ಮನ ಪ್ರಿಯಕರನಿಂದಲೇ 6 ವರ್ಷದ ಮಗು ಕೊಲೆಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನಲ್ಲಿ ಸಂಭವಿಸಿದೆ.

ವಾಟದಹೊಸಹಳ್ಳಿಯ ನಾರಾಯಣಸ್ವಾಮಿ ಮತ್ತು ಪ್ರಭಾವತಿ ದಂಪತಿಯ ಮಗು ವಿಷ್ಣುವರ್ಧನ್(6) ಮೃತ ದುರ್ದೈವಿ. ಮಾ.16ರಂದು ವಿಷ್ಣುವರ್ಧನ್ ನಾಪತ್ತೆಯಾಗಿದ್ದ. ಎಲ್ಲ ಕಡೆ ಹುಡುಕಾಡಿದ ಪಾಲಕರು ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣದ ಬೆನ್ನಹತ್ತಿದ ಪೊಲೀಸರು ರಾಮಾಂಜಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಫೋಟಕ ರಹಸ್ಯ ಬಯಲಾಗಿದೆ. ಇದನ್ನೂ ಓದಿರಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಕೊಲೆ ಆರೋಪಿ ರಾಮಾಂಜಿ

ಮೃತ ಮಗುವಿನ ತಾಯಿ ಜತೆ ರಾಮಾಂಜಿ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇತ್ತೀಚೆಗೆ ಭಿನ್ನಾಭಿಪ್ರಾಯ ಮೂಡಿ ಇಬ್ಬರು ಬೇರೆಯಾಗಿದ್ದರು. ಅದೇ ಸಿಟ್ಟಿನಲ್ಲಿದ್ದ ರಾಮಾಂಜಿ, ಮತ್ತೆ ಪ್ರಭಾವತಿಯನ್ನ ಓಲೈಸಿಕೊಳ್ಳಲು ಆಕೆಯ ಮಗನನ್ನೇ ಕಿಡ್ನ್ಯಾಪ್ ಮಾಡಿದ್ದ. ಮಗ ನಾಪತ್ತೆಯಾಗಿದ್ದಾನೆ ಎಂದು ಪ್ರಭಾವತಿ ಮತ್ತು ನಾರಾಯಣಸ್ವಾಮಿ ಇತ್ತ ದೂರು ಕೊಟ್ಟಿದ್ದರು. ಇದರಿಂದ ಕೆರಳಿದ ರಾಮಾಂಜಿ, ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ಮೂಟೆಯಲ್ಲಿ ತುಂಬಿ ಸಾದರ್ಲಹಳ್ಳಿ ಬಳಿ ಬಿಸಾಡಿದ್ದ.

ಪೊಲೀಸ್​ ವಿಚಾರಣೆ ವೇಳೆ ಸತ್ಯ ಬಯಲಾಗಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಾಲಕ ಅಸ್ಥಿಪಂಜರ ಪತ್ತೆಯಾಗಿದೆ. ಆರೋಪಿ ರಾಮಾಂಜಿಯನ್ನ ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ.