Languriya Waterfall: ಜಲಪಾತದಲ್ಲಿ ಹುಚ್ಚಾಟ ಪ್ರದರ್ಶಿಸಲು ಹೋಗಿ ಜಾರಿಬಿದ್ದ ಆರು ಯುವತಿಯರು ಪವಾಡದಂತೆ ಬದುಕುಳಿದ ಘಟನೆ ಬಿಹಾರದ ಗಯಾ ಜಿಲ್ಲೆಯ ಲಂಗುರಿಯಾ ಜಲಪಾತದಲ್ಲಿ ಸಂಭವಿಸಿದೆ.
ಇದನ್ನೂ ಓದಿ: ಶೆಫಾಲಿ ಸಾವು: ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣವೇನು? ಸ್ಫೋಟಕ ಸಂಗತಿ ಬಿಚ್ಚಿಟ್ಟ ಹೃದ್ರೋಗ ತಜ್ಞ..! Shefali Jariwala
ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಮೋಜು-ಮಸ್ತಿ ಮಾಡಲು ಇಳಿದ ಯುವತಿಯರು, ಕಲ್ಲಿನ ಮಧ್ಯೆ ಹಾದು ಹೋಗುವ ದುಸ್ಸಾಹಸಕ್ಕೆ ಕೈಹಾಕಿದ್ದರು. ಈ ವೇಳೆ ಆರಕ್ಕೆ ಆರು ಜನರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಕೂಡಲೇ ಅಲ್ಲೇ ಇದ್ದ ಇತರರು, ಒಬ್ಬೊಬ್ಬರಂತೆ ಯುವತಿಯರ ಕೈಹಿಡಿದು ದಡಕ್ಕೆ ಎಳೆದೊಯ್ದಿದ್ದಾರೆ. ಒಟ್ಟಿನಲ್ಲಿ ಆರು ಮಂದಿ ಕೂಡ ಪವಾಡಸದೃಶವಾಗಿ ಪಾರಾಗಿದ್ದಾರೆ.
ಭಾನುವಾರ (ಜೂ.29) ಸಂಭವಿಸಿದ ಈ ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಆರು ಯುವತಿಯರು ಪವಾಡದಂತೆ ಬದುಕುಳಿದಿದ್ದು, ಓರ್ವ ಯುವತಿ ಮಾತ್ರ ಬಂಡೆಗೆ ಸಿಲುಕಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನ ಹತ್ತಿರದ ಆಸ್ಪತ್ರೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಅಸಲಿಗೆ ಲಂಗುರಿಯಾ ಜಲಪಾತದಲ್ಲಿ ಭಾರೀ ಪ್ರಮಾಣದ ನೀರಿನ ಹರಿವನ್ನು ನೋಡಿದ್ದು ಇದೇ ಮೊದಲು ಎಂದು ಗ್ರಾಮಸ್ಥರು ಹೇಳಿದ್ದಾರೆ,(ಏಜೆನ್ಸೀಸ್).