ನ್ಯೂಸ್

ಬೈಕ್​, ಟಿಟಿ​, ಲಾರಿ ನಡುವೆ ಭೀಕರ ಅಪಘಾತ; ಉಜ್ಜೈನಿ ಮಹಾಕಾಲ ದರ್ಶನ ಮುಗಿಸಿ ಬರುತ್ತಿದ್ದ ಬೆಳಗಾವಿಯ ಭಕ್ತರು ಸೇರಿದಂತೆ ಆರು ಮಂದಿ ಸಾವು

ಇಂದೋರ್: ಬೈಕ್​, ಟಿಟಿ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟು, 16 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ ಜಿಲ್ಲೆಯ ಮ್ಹೌ ತಾಲ್ಲೂಕಿನ ಮನ್​ಪುರ್ ಎಂಬಲ್ಲಿ ನಡೆದಿದೆ. 

ಅಪಘಾತದ ಕುರಿತು ಮಾಹಿತಿ ನೀಡಿರುವ ಎಎಸ್​ಪಿ ರೂಪೇಶ್ ದ್ವಿವೇದಿ, ಇಳಿಜಾರಿನಲ್ಲಿ ವೇಗವಾಗಿ ಬಂದ ಬೈಕ್ ಹಾಗೂ ಮಿನಿ ಬಸ್​ ನಿಯಂತ್ರಣ ಸಿಗದೆ ಲಾರಿಗೆ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿ ಇಬ್ಬರು ಹಾಗೂ ಬಸ್​ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ 16 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತರ ಪೈಕಿ ನಾಲ್ವರು ಕರ್ನಾಟಕದ ಬೆಳಗಾವಿ ಮೂಲದವರು ಎಂದು ತಿಳಿದು ಬಂದಿದ್ದು, ಉಜ್ಜಯಿನಿಯ ಪ್ರಸಿದ್ಧ ಮಹಾಕಾಲ್ ದೇವಾಲಯಕ್ಕೆ ಭೇಟಿ ನೀಡಿ ವಾಪಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಎಎಸ್​ಪಿ ರೂಪೇಶ್ ದ್ವಿವೇದಿ ತಿಳಿಸಿದ್ಧಾರೆ.