ಬೆಂಗಳೂರು: ರಾಜ್ಯ ಗುಪ್ತಚರ ಇಲಾಖೆಯ ಬೆಂಗಳೂರು ಎಸ್ಪಿ ಆರ್.ಚೇತನ್ ಸೇರಿ 6 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್ಮೆಂಟ್ನ ಡಿಐಜಿ ಆಗಿ ವೈ.ಎಸ್. ರವಿಕುಮಾರ್, ಮೈಸೂರು ವಿಭಾಗದ ಕರ್ನಾಟಕ ಪೊಲೀಸ್ ಅಕಾಡೆಮಿಯ ಡೈರೆಕ್ಟರ್ ಆಗಿ ದಿವ್ಯಾ ವಿ. ಗೋಪಿನಾಥ್, ಹಾವೇರಿ ಇಂಟೆಲಿಜೆನ್ಸ್ ಎಸ್ಪಿ ಆಗಿ ಹನುಮಂತರಾಯ, ಕೋಲಾರ ಎಸ್ಪಿ ಆಗಿ ನಾರಾಯಣ ಎಂ., ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಶಿವಕುಮಾರ್, ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನಾಗಿ ಚೇತನ್ ಆರ್. ಅವರನ್ನು ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಆರ್.ಚೇತನ್ ಅವರನ್ನ ರಾಜ್ಯ ಗುಪ್ತಚರ ಇಲಾಖೆಗೆ ಕಳೆದ ಡಿಸೆಂಬರ್ 21ರಂದು ವರ್ಗಾವಣೆ ಮಾಡಲಾಗಿತ್ತು. ತಿಂಗಳು ತುಂಬುವ ಮೊದಲೇ ಇಲ್ಲಿಂದ ಕಲಬುರಗಿಗೆ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದ ಡಾ. ವೈ.ಎಸ್. ರವಿಕುಮಾರ್ ಅವರನ್ನ ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್ಮೆಂಟ್ನ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.