ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ, ಕನಿಷ್ಠ 800 ಜನರು ಸಾವನ್ನಪ್ಪಿದ್ದು, 2500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬಲವಾದ ಕಂಪನದಿಂದ ಉಂಟಾದ ವಿನಾಶ ಮತ್ತು ಅವಶೇಷಗಳ ಅಡಿಯಲ್ಲಿ ಕಾಣೆಯಾದವರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಪಾಕ್ ಪ್ರಧಾನಿ: ಮೋದಿ-ಪುಟಿನ್ ಹೋಗುವಾಗ ಕೈ ಕಟ್ಟಿ ನಿಂತ ಶೆಹಬಾಜ್ ಷರೀಫ್! Pak PM
ಭಾನುವಾರ (ಆ.31) ತಡರಾತ್ರಿ ಸಂಭವಿಸಿದ ಭೂಕಂಪವು ನೆರೆಯ ನಂಗಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಬಳಿಯ ಕುನಾರ್ ಪ್ರಾಂತ್ಯದ ಹಲವಾರು ಪಟ್ಟಣಗಳನ್ನು ಅಪ್ಪಳಿಸಿದೆ. ರಾತ್ರಿ 11:47 ಕ್ಕೆ 6.0 ತೀವ್ರತೆಯ ಭೂಕಂಪವು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಪೂರ್ವ-ಈಶಾನ್ಯಕ್ಕೆ 27 ಕಿಲೋಮೀಟರ್ ಕೇಂದ್ರೀಕೃತವಾಗಿತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಕುನಾರ್ ಪ್ರಾಂತ್ಯದ ನೂರ್ ಗಲ್, ಸಾವ್ಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಜಿಲ್ಲೆಗಳಲ್ಲಿ ಪ್ರಬಲ ಭೂಕಂಪನದಿಂದ ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದುವು 34.50°N ಅಕ್ಷಾಂಶ ಮತ್ತು 70.81°E ರೇಖಾಂಶದಲ್ಲಿ, 160 ಕಿಲೋ ಮೀಟರ್ ಆಳದಲ್ಲಿ ಇದೆ.
ಜಲಾಲಾಬಾದ್ ಒಂದು ಜನನಿಬಿಡ ವ್ಯಾಪಾರ ನಗರವಾಗಿದೆ. ಪುರಸಭೆಯ ಪ್ರಕಾರ ಇದು ಸುಮಾರು 300,000 ಜನಸಂಖ್ಯೆಯನ್ನು ಹೊಂದಿದ್ದು, ಈ ಪ್ರದೇಶವು ತುಂಬಾ ದೊಡ್ಡದಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ಕಟ್ಟಡಗಳನ್ನು ಮಣ್ಣಿನ ಇಟ್ಟಿಗೆಗಳು, ಮರ, ಕಾಂಕ್ರೀಟ್ ಮತ್ತು ಇಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ.
(ಏಜೆನ್ಸೀಸ್)