ನ್ಯೂಸ್

ಬೆಂಗಳೂರಿನಲ್ಲಿ IDO ಸ್ಪರ್ಧೆಯ 5ನೇ ಆವೃತ್ತಿ; ಸಮಾರಂಭದಲ್ಲಿ ಸೈನಾ ನೆಹ್ವಾಲ್​, ಆರೋಗ್ಯ ಸಚಿವ ಭಾಗಿ

ಬೆಂಗಳೂರು: ಫೆ.02ರಂದು ರಾಜ್ಯ ರಾಜಧಾನಿಯಲ್ಲಿ ನೆಫ಼್ರೋಪ್ಲಸ್‌ ವತಿಯಿಂದ ಇಂಡಿಯನ್‌ ಡಯಾಲಿಸಿಸ್‌ ಒಲಿಂಪೈಡ್‌ ಸ್ಪರ್ಧೆಯ 5ನೇ ಆವೃತ್ತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ಆರೋಗ್ಯ ಸಚಿವರಾದ ದಿನೇಶ್‌ ಗುಂಡುರಾವ್‌ ಮತ್ತು ಮಾಜಿ ಬಾಡ್ಮಿಂಟನ್​ ತಾರೆ ಸೈಯ್ನಾ ನೆಹ್ವಾಲ್‌ ಹಾಜರಾಗಿ, ತಂಡಕ್ಕೆ ಶುಭ ಕೋರಿದರು.

ಹಿಂದಿನ ಆವೃತ್ತಿಗಳ ಭರ್ಜರಿ ಯಶಸ್ಸಿನ ಬುನಾದಿಯಿಂದ ಸ್ಫೂರ್ತಿ ಪಡೆದು, ಏಶಿಯಾ ಮಹಾದ್ವೀಪದ ಅತಿ ದೊಡ್ಡ ಡಯಾಲಿಸಿಸ್‌ ಕೇಂದ್ರಗಳ ಸಮೂಹವಾಗಿರುವ ನೆಫ಼್ರೋಪ್ಲಸ್ (Nephroplus), ಡಯಾಲಿಸಿಸ್‌ ಆರೈಕೆಯ ಪರಿಭಾಷೆಯನ್ನು ಪುನರ್ವ್ಯಾಖ್ಯಾನಿಸುವಲ್ಲಿ ಮುಂಚೂಣಿಯಲ್ಲಿದ್ದು, ಇಂಡಿಯನ್ ಡಯಾಲಿಸಿಸ್ ಒಲಿಂಪೈಡ್ (IDO) ಸ್ಪರ್ಧೆಯ 5ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.‌ ಈ ಬಹುನಿರೀಕ್ಷಿತ ಕ್ರೀಡಾಸ್ಪರ್ಧೆಯು ವಿಶೇಷವಾಗಿ ಡಯಾಲಿಸಿಸ್ ರೋಗಿಗಳಿಗೆ ಮಾತ್ರವೇ ಸೀಮಿತವಾದ ಕ್ರೀಡಾಸ್ಪರ್ಧೆಯನ್ನು ಬೆಳಗ್ಗೆ 9:೦೦ರಿಂದ ಸಾಯಂಕಾಲ 4:30ರವರಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿತು.

ಇದು ಮೂತ್ರಪಿಂಡದ ವೈಫಲ್ಯದಿಂದಾಗಿ ಸಮಸ್ಯೆಯಿದ್ದರೂ ಸಹ ಸ್ಪರ್ಧಾರ್ತಿಗಳು ತಮ್ಮಲ್ಲಿನ ಸಮುತ್ಥಾನ ಶಕ್ತಿ ಮತ್ತು ಬಲದ ಪ್ರದರ್ಶನಕ್ಕೆ ಒಂದು ಸ್ಫೂರ್ತಿದಾಯಕ ವೇದಿಕೆಯಾಗಿ ಮೂಡಿಬಂದಿದೆ. ಈ ಕಾರ್ಯಕ್ರಮಕ್ಕೆ 1200ಕ್ಕೂ ಜನರು ಆಗಮಿಸಿದ್ದರು. ಆಹ್ವಾನಿತ ಅತಿಥಿಯರಾಗಿ ಅವರಲ್ಲಿ ಸುಮಾರು 800 ಡಯಾಲಿಸಿಸ್‌ ಒಳಪಡುತ್ತಲಿರುವ ರೋಗಿಗಳು ಪಾಲ್ಗೊಂಡಿದ್ದರು. ಡಾ|| ರಘುನಂದನ್‌ (ರಾಜ್ಯ ಅಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕರು), ಡಾ|| ನಾಜಿ಼ಯಾ ಶೇಖಾಜೀ, ಮತ್ತು ಶ್ರೀಮತಿ ನೇತ್ರಾವತಿ - ಇವರೆಲ್ಲರೊಂದಿಗೆ ಅಭಯಪ್ರದರಾಗಿ ಆಸೀನರಾಗಿದ್ದರು. ಅವರ ಉಪಸ್ಥಿತಿಯು ಸ್ಪರ್ಧಾರ್ತಿಗಳಿಗೆ ಅದ್ಭುತವಾದ ಪ್ರೇರಣೆಯಾಗಿ ಪರಿಣಮಿಸಿತು.

ಇಂಡಿಯನ್ ಡಯಾಲಿಸಿಸ್ ಒಲಿಂಪೈಡ್ ಸ್ಪರ್ಧೆಯು ನೆಫ್ರೋಪ್ಲಸ್ ನಮ್ಮ ಅತಿಥಿಗಳಿಗೆ (ರೋಗಿಗಳಿಗೆ) ಹಮ್ಮಿಕೊಂಡಿರುವ ಸಂಸ್ಥೆಯ ಅತ್ಯಂತ ಪ್ರಮುಖವಾದ ಯೋಜನೆಯಾಗಿದ್ದು, ಇದು ಡಯಾಲಿಸಿಸ್ ಒಳಗಾಗುವವರು ಕ್ರೀಡೆ, ಆಗಮಿಸಿದ ಇತರೆ ಅತಿಥಿಯರೊಂದಿಗೆ ಒಡನಾಟ ನಡೆಸುವ ಮೂಲಕ ಭೌತಿಕ ಚೈತನ್ಯದ ಆನಂದವನ್ನು ದೈಹಿಕವಾಗಿ ಮರಳಿ ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತದೆ. ಈ ಕಾರ್ಯಕ್ರಮವು ಹಲವಾರು ರೋಮಾಂಚನಕಾರಿ ಕ್ರೀಡೆಗಳನ್ನು ಹೊಂದಿತ್ತು, ಉದಾಹರಣೆಗೆ, ಬ್ಯಾಡ್ಮಿಂಟನ್‌, ಟೇಬಲ್‌ ಟೆನ್ನಿಸ್‌, ಫು಼ಟ್ ಬಾಲ್(ಕೇವಲ ಪೆನಲ್ಟಿ ಶೂಟ್-ಔಟ್) , 50 ಮೀಟರ್‌ ನಡೆದಾಡುವ ಸ್ಪರ್ಧೆ, ಬಾಸ್ಕೆಟ್‌ ಬಾಲ್‌ (ಐದು ಎಸೆತಗಳ), ಮತ್ತು ಕೇರಮ್‌ ಬೋರ್ಡ್​.

ಈ ಒಲಿಂಪೈಡ್‌ ಕುರಿತಾಗಿ ಮಾತನಾಡುತ್ತಾ, ನೆಫ್ರೋಪ್ಲಸ್ ಸಂಸ್ಥೆಯ ಸ್ಥಾಪಕರು ಮತ್ತು ಸಿಇಓ ಆಗಿರುವ ವಿಕ್ರಂ ವುಪ್ಪಲ, ನೆಫ್ರೋಪ್ಲಸ್ನಲ್ಲಿ ನಾವು ಏನೆಂದು ನಂಬಿರುವೆವುವೆಂದರೆ, ಡಯಾಲಿಸಿಸ್‌ ಒಬ್ಬ ವ್ಯಕ್ತಿಯ ಇಡಿಯಾದ ಜೀವನವಾಗಬಾರದು. ಅದು ಜೀವನದ ಒಂದು ಭಾಗವಾಗಿಬಿಡಬೇಕು ಅಷ್ಟೇ. ಇಂಡಿಯನ್ ಡಯಾಲಿಸಿಸ್ ಒಲಂಪೈಡ್ ಎಂಬುದು ಡಯಾಲಿಸ್ ಮೇಲೆ ಅವಲಂಬಿತ ಜನರೂ ಸಹ ಇತರ ಜನರಂತೆ ಕ್ರೀಡೆಗಳಲ್ಲಿ ಭಾಗವಹಿಸುತ್ತಾ ಸಕ್ರಿಯ, ಚೈತನ್ಯಯುಕ್ತ, ಜೀವನವನ್ನು ಸಾಗಿಸಬಹುದು ಎಂದು ಸಾಬೀತುಪಡಿಸಲು ನಮ್ಮಿಂದ ಕಂಡುಕೊಳ್ಳಲಾದ ದಾರಿ. ವರ್ಷಾನುವರ್ಷ ನಾವು ಸ್ಪರ್ಧಾರ್ತಿಗಳ ಸಮುತ್ಥಾನ ಶಕ್ತಿ ಮತ್ತು ಉತ್ಸಾಹದಿಂದ ಪ್ರೇರಣೆ ಪಡೆಯುತ್ತಲಿದ್ದೇವೆ ಎಂದರು.

ಇದು ಅವರ ಸಬಲೀಕರಣಕ್ಕೆ ‌ಹೀಗೆಯೇ ಮುಂದೆಯೂ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಲು ಸ್ಫೂರ್ತಿ ನೀಡುತ್ತಲಿರುತ್ತೇವೆ. ಇಂತಹದೊಂದು ಅಪೂರ್ವ ಕಾರ್ಯಕ್ರಮವೊಂದನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಕ್ಷಣಕ್ಕೆ ತುದಿಗಾಲಿನಲ್ಲಿ ನಿಂತಿದ್ದೇವೆ ಮತ್ತು ಇದರಿಂದ ಮೂಡಿಬರುವ ಬಲ ಮತ್ತು ದೃಢ ಸಂಕಲ್ಪದ ಆಶ್ಚರ್ಯದಾಯಕ ಕಥಾನಕ-ಕತೆಗಳಿಗೆಲ್ಲ ಸಾಕ್ಷಿಯಾಗಲು ಜಾತಕ ಪಕ್ಷಿಯಂತೆ ಕಾಯುತ್ತಲಿರುವೆವು ಎಂದರು.

ನೆಫ಼್ರೋಪ್ಲಸ್ 110 ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು 21 ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಾಪಿತವಾಗಿದ್ದು, ಇದು ಡಯಾಲಿಸಿಸ್‌ ಆರೈಕೆಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಅತ್ಯುತ್ತಮ ಗುಣಮಟ್ಟ ಹಾಗೂ ಎಲ್ಲರ ಕೈಗೆಟಕುವ ಬೆಲೆಯಲ್ಲಿ ಸೇವೆಗಳು ದೊರೆಯುವ ಕಾರಣ ಈ ಕ್ಷೇತ್ರದ ನಾಯಕ ಪಟ್ಟ ಪಡೆದಿದೆ. 4,700ಕ್ಕೂ ಮಿಗಿಲಾಗಿ ಎಂಬಂತೆ ಡಯಾಲಿಸಿಸ್‌ ರೋಗಿಗಳ ಆರೈಕೆ ಮಾಡುತ್ತಲಿರುವ ನಾವು, ಅತಿಥಿ ದೇವೋಭವ ಹಾಗೂ ಕ್ಲಿನಿಕಲ್‌ ಅಪ್ರಮೇಯತೆಗೆ ಒತ್ತು ಕೊಡವಲ್ಲಿ ಸಾಗಿರುವೆವು ಎಂದು ಹೇಳಿದರು.

ನೆಫ಼್ರೋಪ್ಲಸ್‌ ಕುರಿತಾಗಿ

ನೆಫ಼್ರೋಪ್ಲಸ್‌ 5 ದೇಶಗಳಲ್ಲಿ ವ್ಯಾಪಿಸಿದ್ದು, 300ಕ್ಕೂ ಅಧಿಕ ನಗರಗಳಲ್ಲಿ, 500ಕ್ಕೂ ಅಧಿಕ ಡಯಾಲಿಸಿಸ್‌ ಕ್ಲಿನಿಕ್​ಗಳನ್ನು ನಡೆಸುತ್ತಲಿರುವ ಸಂಸ್ಥೆಯಾಗಿದೆ. ತನ್ನಲ್ಲಿನ ಗುಣಮಟ್ಟಕ್ಕೆ ಮತ್ತು ರೋಗಿಗಳಿಗೆ ಕೇಂದ್ರಿತವಾಗಿರುವುದಕ್ಕೆ ಹೆಸರುವಾಸಿಯಾಗಿದೆ. ಈ ಕಂಪನಿಯು ಜಗತ್ತಿನಾದ್ಯಂತ ಇರುವ ಡಯಾಲಿಸಿಸ್‌ ರೋಗಿಗಳು ಒಂದು ಸುದೀರ್ಘ, ಖುಷಿಯಾದ ಮತ್ತು ಗುಣಾತ್ಮಕ ಜೀವನ ಸಾಗಿಸಬೇಕೆಂಬ ಧ್ಯೇಯವನ್ನು ಗುರಿಯಾಗಿಸಿಕೊಂಡು 15 ವರ್ಷಗಳ ಪೂರ್ವದಲ್ಲಿ ಸ್ಥಾಪನೆಯಾಗಿತ್ತು. ಈ ಕಂಪನಿಯು ಪ್ರತಿ ತಿಂಗಳು ಸುಮಾರು 32,000 ರೋಗಿಗಳ ಶುಶ್ರೂಷೆಯನ್ನು ಮಾಡುತ್ತಲಿದೆ.

ಹೆಚ್ಚಿನ ಮಾಹಿತಿಗಾಗಿ: https://www.NephroPlus.com/