ನ್ಯೂಸ್

ಕಿರು, ಮಧ್ಯವಾರ್ಷಿಕ ಪರೀಕ್ಷೆ ಆಧರಿಸಿ 5,8,9ನೇ ತರಗತಿ ಫಲಿತಾಂಶ: ಮೌಲ್ಯಾಂಕನ ಲೆಕ್ಕಕ್ಕಿಲ್ಲ

ಬೆಂಗಳೂರು

ರಾಜ್ಯಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ 5,8 ಮತ್ತು 9ನೇ ತರಗತಿ ಮೌಲ್ಯಾಂಕನ ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಮಧ್ಯವಾರ್ಷಿಕ ಮತ್ತು ಕಿರು ಪರೀಕ್ಷೆಗಳನ್ನು ಆಧರಿಸಿ ಲಿತಾಂಶ ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ.

2023-14ನೇ ಸಾಲಿನ 5,8 ಮತ್ತು 9ನೇ ತರಗತಿ ಮೌಲ್ಯಾಂಕನದ ಪಲಿತಾಂಶವನ್ನು ಏ.8ರಂದು ಶಾಲೆಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿತ್ತು. ಬಳಿಕ ಲಿತಾಂಶ ಪ್ರಕಟಿಸದಂತೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದ್ದು, ತೀರ್ಪು ಬಾಕಿ ಇದೆ.

ಆದರೆ, ಇದೇ 29ರಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷಾರಂಭವಾಗುತ್ತಿವೆ. 5,8ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಲಿತಾಂಶ ನೀಡದಿದ್ದರೆ, ಮಕ್ಕಳು ಮುಂದಿನ ತರಗತಿಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಶುಲ್ಕ ಪಾವತಿ, ವರ್ಗಾವಣೆ ಪ್ರಮಾಣಪತ್ರ ಮತ್ತು ವ್ಯಾಸಂಗ ಪ್ರಮಾಣಪತ್ರವನ್ನು ಪಡೆಯುವುದು ಸೇರಿ ಹಲವು ಶೈಕ್ಷಣಿಕ ಕೆಲಸಗಳಿಗೆ ಅಡ್ಡಿಯಾಗಲಿದೆ.

ಈ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಗತ್ಯ ಕ್ರಮ ವಹಿಸುವಂತೆ ಮತ್ತು ಮಕ್ಕಳ ಶೈಕ್ಷಣಿಕ ಭವಿಷ್ಯ ಸುಗಮಗೊಳಿಸಲು ಕ್ರಮ ವಹಿಸಬೇಕು. ಅದರಂತೆ ಈಗಾಗಲೇ ಶಾಲೆಗಳಲ್ಲಿ ನಡೆದಿರುವ ಎ್ಎ (ರಚನಾತ್ಮಕ ಮೌಲ್ಯಮಾಪನ)-1,2,3,4 ಮತ್ತು ಎಸ್‌ಎ-1ರ (ಸಂಕಲಾತ್ಮಕ ಮೌಲ್ಯಮಾಪನ) ಮೌಲ್ಯಾಂಕನದ ಆಧಾರದಲ್ಲಿ ಮಕ್ಕಳ ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.