ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಮಹಾನಗರ, ಪುರಸಭೆ, ನಗರಸಭೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮನೆ, ಕಟ್ಟಡ, ಸೈಟ್, ವಾಣಿಜ್ಯ ಕಟ್ಟಡಗಳು ಸೇರಿ ಎಲ್ಲ ಸ್ಥಿರಾಸ್ತಿಗಳಿಗೆ ಇ-ಖಾತಾ ವಿತರಿಸಲು ಇನ್ನೂ ಸಾಧ್ಯವಾಗಿಲ್ಲ. ಇ-ಖಾತಾ ಕಡ್ಡಾಯ ಮಾಡಿ ವರ್ಷ ತುಂಬುತ್ತಿದ್ದು, ಶೇ.43 ಆಸ್ತಿಗಳಿಗೆ ಮಾತ್ರ ಡಿಜಿಟಲ್ ಖಾತೆ ವಿತರಿಸಲಾಗಿದೆ. ಉಳಿದ ಶೇ.57 ಆಸ್ತಿಗಳಿಗೆ ಖಾತಾ ಸಿಗದೆ ವಾರಸುದಾರರು ಪರದಾಡುತ್ತಿದ್ದಾರೆ.
ಅನಧಿಕೃತ ಸೈಟ್‌ಗಳಿಗೆ ಕಡಿವಾಣ, ಅಕ್ರಮ ವಹಿವಾಟು, ಭೂ ಕಬ್ಜ ಮತ್ತು ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಕಂದಾಯ ಇಲಾಖೆ 2024ರ ಅಕ್ಟೋಬರ್‌ನಲ್ಲಿ ಇ-ಖಾತಾ ಕಡ್ಡಾಯ ಮಾಡಿತು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ಸ್‌ಟಾವೇರ್ ಅನ್ನು ಇ-ಸ್ವತ್ತು, ಇ-ಆಸ್ತಿ ಮತ್ತು ಯುನಿೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಂ (ಯುಎಲ್‌ಎಂಎಸ್) ಸ್‌ಟಾವೇರ್‌ಗೆ ಸಂಯೋಜನೆ ಮಾಡಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ ಮತ್ತು ವಸತಿ ಯೋಜನೆ ಆಸ್ತಿಗಳಿಗೆ ಯುಎಲ್‌ಎಂಎಸ್‌ನಲ್ಲಿ ಡಿಜಿಟಲ್ ಖಾತಾ, ಗ್ರಾಪಂ ವ್ಯಾಪ್ತಿಯ ಆಸ್ತಿಗೆ ಇ-ಸ್ವತ್ತಿನಲ್ಲಿ ಮತ್ತು ನಗರ ಪ್ರದೇಶದಲ್ಲಿ ಇ- ಆಸ್ತಿ ತಂತ್ರಾಂಶದಲ್ಲಿ ಇ-ಖಾತಾ ಪಡೆದರೆ ಅಷ್ಟೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ನಡೆಯಲಿದೆ ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಅಂದಿನಿಂದ ಇ-ಖಾತಾ ಪಡೆಯುವತ್ತ ಆಸ್ತಿ ಮಾಲೀಕರು ಮುಖ ಮಾಡಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 44,85,107 ಅಧಿಕೃತ ಮತ್ತು 9,93,342 ಅನಧಿಕೃತ ಸೇರಿ ಒಟ್ಟಾರೆ 54.78 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದೆ. ಎಲ್ಲೆಡೆ ಅಭಿಯಾನ ಮಾಡಿದರೂ ಮೇ ಅಂತ್ಯಕ್ಕೆ ಅಧಿಕೃತ ಆಸ್ತಿಗಳ ಪೈಕಿ 21.18 ಲಕ್ಷ ಮತ್ತು ಅನಧಿಕೃತ ಆಸ್ತಿಗಳ ಪೈಕಿ 2.21 ಲಕ್ಷ ಆಸ್ತಿಗಳು ಸೇರಿ 23.40 ಲಕ್ಷ ಆಸ್ತಿಗಳಿಗೆ ಮಾತ್ರ ಡಿಜಿಟಲ್ ಖಾತಾ ವಿತರಿಸಲು ಸ್ಥಳೀಯ ಸಂಸ್ಥೆಗಳಿಗೆ ಸಾಧ್ಯವಾಗಿದೆ. ಇನ್ನೂ 31.38 ಲಕ್ಷ ಆಸ್ತಿಗಳಿಗೆ ಇ-ಖಾತಾ ಭಾಗ್ಯ ಸಿಕ್ಕಿಲ್ಲ. ಪರಿಣಾಮ ಆಸ್ತಿ ಮಾಲೀಕರು ಸಾಲಸೌಲಭ್ಯ, ಮಾರಾಟ, ಆಸ್ತಿ ವರ್ಗಾವಣೆ, ಅಡಮಾನ ಸೇರಿ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಭಾಗ, ವಿಲ್, ದಾನಪತ್ರ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ತಿ ಮಾರಾಟಗಾರ ಮತ್ತು ಖರೀದಾರರ ವ್ಯವಹಾರಗಳು ಅರ್ಧಕ್ಕೆ ನಿಂತು ಹಣಕಾಸಿನ ಬಿಕ್ಕಟ್ಟು ಉಂಟಾಗಿದೆ. ಮನೆ, ಕಟ್ಟಡ ನಿರ್ಮಾಣಕ್ಕೆ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಆಗುತ್ತಿಲ್ಲ. ವಿದ್ಯುತ್, ನೀರಿನ ಸಂಪರ್ಕ ಸಹ ಸಿಗುತ್ತಿಲ್ಲ. ಸರ್ಕಾರದ ಬೊಕ್ಕಸಕ್ಕೂ ಸಾವಿರಾರು ಕೋಟಿ ರೂಪಾಯಿ ರಾಜಸ್ವ ಸಂಗ್ರಹದಲ್ಲಿ ಇಳಿಕೆ ಸಹ ಉಂಟಾಗುತ್ತಿದೆ.
ಅಧಿಕೃತ, ಅನಧಿಕೃತ ಸ್ವತ್ತುಗಳ ಸಂಖ್ಯೆ ಮತ್ತು ಇ-ಖಾತಾ ವಿತರಣೆ ಅಂಕಿ-ಅಂಶಗಳು
ಜಿಲ್ಲೆ ಸ್ವತ್ತುಗಳ ಸಂಖ್ಯೆ ಇ-ಖಾತಾ ವಿತರಣೆ ಶೇಕಡವಾರು
ಬೆಳಗಾವಿ 4,45,413 1,20,142 ಶೇ.27
ದಕ್ಷಿಣ ಕನ್ನಡ 3,59,058 1,13,307 ಶೇ.32
ಧಾರವಾಡ 3,57,736 1,36,320 ಶೇ.38
ಮೈಸೂರು 3,48,008 1,17,760 ಶೇ.34
ವಿಜಯಪುರ 2,47,793 67,981 ಶೇ.27
ತುಮಕೂರು 2,45,861 86,322 ಶೇ.35
ಬಾಗಲಕೋಟೆ 2,27,816 52,210 ಶೇ.23
ದಾವಣಗೆರೆ 2,21,232 1,04,565 ಶೇ.47
ರಾಯಚೂರು 2,25,012 1,39,248 ಶೇ.62
ಕಲಬುರಗಿ 2,05,551 73,866 ಶೇ.36
ಗ್ರಾಪಂನಲ್ಲಿ ಶುರುವೇ ಆಗಿಲ್ಲ..!
ಗ್ರಾಪಂನ ಪಂಚತಂತ್ರ-2ರಲ್ಲಿ 1.40 ಲಕ್ಷ ಆಸ್ತಿಗಳು ನೋಂದಣಿ ಆಗಿವೆ. ಇ-ಸ್ವತ್ತು ಒಳಗೆ ಕೇವಲ 44 ಲಕ್ಷ ಆಸ್ತಿಗಳಿದ್ದು, ಉಳಿದ 96 ಲಕ್ಷ ಆಸ್ತಿಗಳಿಗೆ ಇ-ಖಾತಾ ಲಭ್ಯವಾಗಿಲ್ಲ. ಅಧಿಕೃತ ಮತ್ತು ಅನಧಿಕೃತ ಸೈಟ್‌ಗಳಿಗೆ ಇ-ಖಾತಾ ನೀಡುವುದರ ಬಗ್ಗೆ ಅಧ್ಯಯನ ವರದಿ ನೀಡುವಂತೆ ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ವಿತರಣೆಗೆ ಚಾಲನೆ ಸಿಕ್ಕಿಲ್ಲ.
ಇ-ಖಾತಾ ವಿಳಂಬಕ್ಕೆ ಕಾರಣಗಳೇನು..?
*ಇ-ಆಸ್ತಿ, ಇ-ಸ್ವತ್ತುನಲ್ಲಿ ಕೆಲವೇ ಆಸ್ತಿಗಳಿಗೆ ಡಿಜಿಟಲ್ ಖಾತಾ ವಿತರಣೆ
*ಇ-ಖಾತಾ ಪಡೆಯಲು ವಿಧಿಸಿರುವ ಷರತ್ತು ಪೂರ್ಣವಾಗದೆ ಪರದಾಟ
*ಸ್ವಂತ, ಮನೆ, ಕಟ್ಟಡ ಮಾಲೀಕರು ಡಿಜಿಟಲ್ ಖಾತಾ ಪಡೆಯುವಲ್ಲಿ ನಿರಾಸಕ್ತಿ
*ಆಸ್ತಿ ವಿಭಜನೆ ಮಾಡಿ ಖಾತೆ ವಿತರಿಸುವ ಸೌಲಭ್ಯ ಇನ್ನೂ ಬಿಡದಿರುವುದು
*ಅಪಾರ್ಟ್‌ಮೆಂಟ್‌ಗಳ ್ಲ್ಯಾಟ್‌ಗಳಿಗೆ ಖಾತಾ ವಿತರಿಸಲು ಸ್‌ಟಾವೇರ್ ಇಲ್ಲ
*ಪೌತಿ ಖಾತೆಗೆ ಕೆವೈಸಿ ಅಡ್ಡಿಯಾಗಿದ್ದು, ಮಕ್ಕಳಿಗೆ ಖಾತಾ ನೀಡಲು ತಾಂತ್ರಿಕ ತೊಡಕು
*ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಖಾತಾ ವಿತರಣೆಗೆ ಲಂಚಕ್ಕೆ ಬೇಡಿಕೆ