ದೇಹದ ಸುತ್ತ ಮದ್ಯದ ಬಾಟಲಿಗಳನ್ನು ಕಟ್ಟಿಕೊಂಡು ಸಿಕ್ಕಿಬಿದ್ದ ಆರೋಪಿಗಳು 
ನ್ಯೂಸ್

ದೇಹದ ಸುತ್ತ 52 ಮದ್ಯದ ಬಾಟಲಿಗಳು: ಸಿನಿಮೀಯ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದ ಖದೀಮರು! | Liquor Smuggling

ಗುಜರಾತ್‌ನಲ್ಲಿ ಬೆಳಕಿಗೆ ಬಂದ ಅಕ್ರಮ ಮದ್ಯ ಸಾಗಣೆ ಪ್ರಕರಣ

ಜುಪಿಟರ್ ಸ್ಕೂಟರ್‌ನಲ್ಲಿ ಮದ್ಯ ಕೊಂಡೊಯ್ಯುತ್ತಿದ್ದ ಆರೋಪಿಗಳು

ಮೈಗೆ ಟೇಪ್ ಸುತ್ತಿ 52 ವಿದೇಶಿ ಮದ್ಯದ ಬಾಟಲಿ ಕಟ್ಟಿಕೊಂಡಿದ್ದ ಖದೀಮರು

Gujarat Liquor Ban: ಗುಜರಾತ್‌ನಲ್ಲಿ ಮದ್ಯ ನಿಷೇಧವಿದ್ದರೂ ಕಳ್ಳಸಾಗಣೆದಾರರು ಮಾಡುವ ಅತಿ ಬುದ್ಧಿವಂತಿಕೆಯ ಕೆಲಸಗಳು ಕೆಲವೊಮ್ಮೆ ಪೊಲೀಸರಷ್ಟೇ ಅಲ್ಲ, ಜನರನ್ನು ಬೆರಗುಗೊಳಿಸುತ್ತವೆ. ಅಂತಹುದೇ ಒಂದು ಘಟನೆ ಇಲ್ಲಿ ನಡೆದಿದೆ. ಈ ವಂಚಕರು ಪೊಲೀಸರ ಕಣ್ಣಿಗೆ ಮಣ್ಣೆ ಎರಚಲು ಮಾಡಿದ ಕಿತಾಪತಿ ನೋಡಿದರೆ ನೀವು ಕೂಡ ಹುಬ್ಬೇರಿಸುತ್ತೀರಿ.

ಗುಜರಾತ್‌ನ ವಡೋದರಾ ಗ್ರಾಮಾಂತರ ವ್ಯಾಪ್ತಿಯ ವಾಘೋಡಿಯಾ ತಾಲೂಕಿನ ಗೋರಜ್ ನರ್ಮದಾ ಕಾಲುವೆ ಬಳಿ ಈ ರೋಚಕ ಕಾರ್ಯಾಚರಣೆ ನಡೆದಿದೆ. ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ, ಅಕ್ರಮ ಮದ್ಯದ ಸಾಗಣೆದಾರನೊಬ್ಬ ಬೋದೇಲಿಯಿಂದ ವಡೋದರಾ ಕಡೆಗೆ ಜುಪಿಟರ್ ಸ್ಕೂಟರ್‌ನಲ್ಲಿ ಕದ್ದುಮುಚ್ಚಿ ವಿದೇಶಿ ಮದ್ಯ ಕೊಂಡೊಯ್ಯುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸೇತುವೆ ಬಳಿ ಆತನ ಸ್ಕೂಟರ್ ತಡೆದು ತಪಾಸಣೆ ನಡೆಸಿದಾಗ ಪೊಲೀಸರಿಗೇ ದೊಡ್ಡ ಆಘಾತ ಕಾದಿತ್ತು

ದೇಹಕ್ಕೆ ಮದ್ಯದ ಬಾಟಲಿಗಳನ್ನೇ ಬಿಗಿದುಕೊಂಡಿದ್ದ ಖದೀಮರು

ಪೊಲೀಸರ ತಪಾಸಣೆಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಆತ ವಿಚಿತ್ರ ಉಪಾಯ ಹೂಡಿದ್ದ. ತನ್ನ ಬಟ್ಟೆಯ ಒಳಭಾಗದಲ್ಲಿ, ಇಡೀ ದೇಹದ ಸುತ್ತಲೂ ಪ್ಲಾಸ್ಟಿಕ್ ಹಾಗೂ ಟೇಪ್ ಬಳಸಿ ಸಣ್ಣ ಸಣ್ಣ ವಿದೇಶಿ ಮದ್ಯದ ಬಾಟಲಿಗಳನ್ನು ಬಿಗಿಯಾಗಿ ಕಟ್ಟಿಕೊಂಡಿದ್ದರು. ಮೇಲ್ನೋಟಕ್ಕೆ ಆತ ಅತ್ಯಂತ ಸಾಮಾನ್ಯ ವ್ಯಕ್ತಿಯಂತೆ ಕಾಣಿಸುತ್ತಿದ್ದರೂ, ಪೊಲೀಸರು ಹತ್ತಿರ ಕರೆದು ಕೂಲಂಕುಷವಾಗಿ ತಪಾಸಣೆ ನಡೆಸಿದಾಗ ಆತನ ಈ ಕಳ್ಳಾಟ ಬಯಲಾಗಿದೆ.

ಇದನ್ನೂ ಓದಿ: ಮೆಣಸಿನಕಾಯಿ ಅಂದ್ರೆ ಬರಿ ಖಾರ ಅನ್ಕೊಂಡಿದ್ದೀರಾ? ಇದರ ಆರೋಗ್ಯ ಲಾಭಗಳ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ! | Green Chilli Benefits

52 ವಿದೇಶಿ ಮದ್ಯದ ಬಾಟಲಿಗಳು ವಶ

ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳ ಮೈಮೇಲಿದ್ದ ಒಟ್ಟು 52 ವಿದೇಶಿ ಮದ್ಯದ ಬಾಟಲಿಗಳು ಹಾಗೂ ಕಳ್ಳಸಾಗಣೆಗೆ ಬಳಸಿದ್ದ ಸ್ಕೂಟರ್ ಅನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಆರೋಪಿಯನ್ನು ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದ್ಯ ಈ ವಿಚಿತ್ರ ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.