ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಆದಿವಾಸಿ ವಿಭಾಗದ ಉಪಾಧ್ಯಕ್ಷ ಬೆಲ್ಲಯ್ಯ ನಾಯಕ್ ತೇಜುವತ್ ಮಾತನಾಡಿದರು. ಎಸ್.ಜಿ.ನಂಜಯ್ಯನಮಠ, ಎಂ.ಬಿ.ಸೌದಾಗರ ಇದ್ದರು.
ಬಾಗಲಕೋಟೆ: ದೇಶದ ಸ್ವಾತಂತ್ರಕ್ಕಾಗಿ ಉದಯಿಸಿದ ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರದ ಮೇಲೆ ಸಂಘಟನೆ ಮಾಡಲಾಗುತ್ತಿದೆ. ಜನಸಂಖ್ಯೆಯಲ್ಲಿ ಶೇ| ೫೦ ರಷ್ಟು ಇರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಅಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಹೀಗಾಗಿ ಯುವಕರು, ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಲು ಪಕ್ಷ ತೀರ್ಮಾನಿಸಿದೆ ಎಂದು ಎಐಸಿಸಿ ಆದಿವಾಸಿ ವಿಭಾಗದ ಉಪಾಧ್ಯಕ್ಷ ಬೆಲ್ಲಯ್ಯ ನಾಯಕ ತೇಜುವತ್ ತಿಳಿಸಿದರು.
ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಪಕ್ಷದ ಎಲ್ಲ ವಲಯಗಳಿಂದ ಹಾಗೂ ಸಾರ್ವಜನಿಕರು, ಸಂಘ-ಸAಸ್ಥೆಗಳ ಅಭಿಪ್ರಾಯ ಪಡೆದುಕೊಂಡು ಕೆಪಿಸಿಸಿಗೆ ವರದಿ ಸಲ್ಲಿಸಲು ಆಗಮಿಸಿದ್ದಾಗಿ ಹೇಳಿದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಽ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆಯಂತೆ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನವನ್ನು ೫೦ ವರ್ಷದೊಳಗಿನ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಟ್ಟು ಜಿಲ್ಲಾ ಘಟಕಗಳ ಪೈಕಿ ಶೇ. ೫೦ ರಷ್ಟು ೫೦ ವರ್ಷದೊಳಗಿನವರಿಗೆ ನೀಡಲಾಗುತ್ತಿದೆ. ಎಸ್‌ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರಿಗೆ ಶೇ. ೫೦ ರಷ್ಟು ಅವಕಾಶ ಕಲ್ಪಿಸಲಾಗುವುದು. ಹಾಗೆಯೇ ಶೇ. ೩೩ ರಷ್ಟು ಮಹಿಳೆಯರಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಜು. ೨೭ ರವರೆಗೆ ಅರ್ಜಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆಕಾಂಕ್ಷಿಗಳು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು. ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷ ಸಂಘಟನೆಗೆ ಕೆಲಸ ಮಾಡಲು ಆಸಕ್ತಿ ಹೊಂದಿರುವ ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಸೋಮಣ್ಣ ಬೇವಿನಮರದ, ಎಂ.ಬಿ.ಸೌದಾಗರ, ನಾಗರಾಜ ಹದ್ಲಿ, ಶ್ರೀನಿವಾಸ ಬಳ್ಳಾರಿ, ಚಂದ್ರಶೇಖರ ರಾಠೋಡ, ಮಲ್ಲಿಕಾರ್ಜುನ ಚರಂತಿಮಠ, ಎನ್.ಬಿ.ಗಸ್ತಿ, ರಮೇಶ ಬದ್ನೂರ, ಅಕ್ಬರ ಮುಲ್ಲಾ ಸೇರಿದಂತೆ ಇತರರು ಇದ್ದರು.