ಮಧ್ಯಪ್ರದೇಶ: ಐದು ವರ್ಷದ ಬಾಲಕ ತನ್ನ ತಂದೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ. ಈ ಕುರಿತಾದ ವಿಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಮಗುವೊಂದು ತನ್ನ ತಂದೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದೆ. ಪೊಲೀಸ್ ಠಾಣೆಯಲ್ಲಿ ಬಾಲಕ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ಸಂಭಾಷಣೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಐದು ವರ್ಷದ ಹಸನೈನ್ ಎಂಬ ಬಾಲಕ ತನ್ನ ತಂದೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ. ಪೊಲೀಸ್ ಅಧಿಕಾರಿಯ ಮುಂದೆ ಕುಳಿತು ಅಳುತ್ತಾನೆ..ಏನಾಯಿತು ಎಂದು ಪೊಲೀಸರು ವಿಚಾರಿಸಿದಾಗ ಬಾಲಕ ತನ್ನ ತಂದೆ ಇಕ್ಬಾಲ್ ವಿರುದ್ಧ ದೂರು ನೀಡಲು ಬಂದಿರುವುದಾಗಿ ತಿಳಿಸಿದ್ದಾನೆ.
ನನ್ನ ತಂದೆಯ ಮೇಲೆ ಏಕೆ ಕೇಸು ಹಾಕುತ್ತಿದ್ದೀರಿ ಎಂದು ಪೊಲೀಸ್ ಕೇಳಿದಾಗ ತಂದೆ ದಿನವೂ ಥಳಿಸುತ್ತಾನೆ, ಮನೆ ಸಮೀಪದ ನದಿಗೆ ಹೋಗಲು ಬಿಡುವುದಿಲ್ಲ, ರಸ್ತೆ ಕಡೆಗೆ ಹೋಗದಂತೆ ತಡೆಯುತ್ತಾನೆ. ನನ್ನ ತಂದೆ ವಿರುದ್ಧ ದೂರು ದಾಖಲಿಸಿಕೊಳ್ಳಿ ನನ್ನ ತಂದೆಯನ್ನು ಜೈಲಿಗೆ ಹಾಕುವಂತೆ ಮುದ್ದಾಗಿ ಪೊಲೀಸ್ ಬಳಿ ಕೇಳಿಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಇಕ್ಬಾಲ್ ಬಗ್ಗೆ ವರದಿ ಬರೆದು ಕರೆತಂದು ಜೈಲಿಗೆ ಹಾಕುವುದಾಗಿ ಭರವಸೆ ನೀಡಿ ಬಾಲಕ ಠಾಣೆಯಿಂದ ಕಳುಹಿಸಿಕೊಟ್ಟಿದ್ದಾರೆ.
ಅಧಿಕಾರಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಗುವಿನ ಧೈರ್ಯದ ಬಗ್ಗೆ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ಮಾಡಿದ್ದಾರೆ.