ನ್ಯೂಸ್

Bus Accident | ಲಾರಿಗೆ ಬಸ್ ಡಿಕ್ಕಿ, 5 ತಿಂಗಳ ಮಗು ಸೇರಿ ಐವರು ಸಾವು

ಉತ್ತರಪ್ರದೇಶ: ( Bus Accident ) ದೆಹಲಿಯಿಂದ ಅಜಂಗಢಕ್ಕೆ ತೆರಳುತ್ತಿದ್ದ ಡಬಲ್​​ ಡೆಕ್ಕರ್​​ ಬಸ್​ಗೆ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಐದು ತಿಂಗಳ ಮಗು ಸೇರಿ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

11 ತಿಂಗಳ ಹೆಣ್ಣು ಮಗು, 5 ವರ್ಷದ ಮಗು, ಮೂವರು ಮಹಿಳೆಯರು ಮತ್ತು ಒಂಬತ್ತು ಪುರುಷರು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಜೇವರ್‌ನ ಕೈಲಾಶ್ ಆಸ್ಪತ್ರೆಗೆ ರವಾನಿಸಲಾಗಿದೆ.

ಬಸ್ ಫೈಜಾಬಾದ್ ಮೂಲದ ಕೃಷ್ಣ ಟ್ರಾವೆಲ್ಸ್ ಕಂಪನಿಗೆ ಸೇರಿದೆ. ಬಸ್ ಛಿದ್ರಗೊಂಡಿದ್ದು, ಮೃತದೇಹಗಳು ಮತ್ತು ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದಾರೆ.

ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಿದ್ದಾರೆ. ಮೂರು ಶವಗಳನ್ನು ಗುರುತಿಸಲಾಗಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ. ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.