Diabetes: ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಅಥವಾ ಉತ್ಪಾದಿಸಿದ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸದಿದ್ದಾಗ ಮಧುಮೇಹ ಕಾಯಿಲೆ ಉಂಟಾಗುತ್ತದೆ. ಇದು ಅಂತಿಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾತ್ತದೆ ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಮಧುಮೇಹವು ಸಾಮಾನ್ಯವಾಗಿ ದೀರ್ಘಕಾಲದ ಕಾಯಿಲೆಯಾಗಿದೆ. ಇದನ್ನು ಔಷಧಿಗಳು ಅಥವಾ ಜೀವನಶೈಲಿಯ ಬದಲಾಣೆಗಳಿಂದ ನಿರ್ವಹಿಸಬಹುದು. ನಾವು ಸೇವಿಸುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವಂತಹ ಕೆಲವು ತರಕಾರಿಗಳು ಇಲ್ಲಿವೆ ನೋಡಿ.
ಪಾಲಕ್ ಸೊಪ್ಪಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೋರಿಗಳು ಕಡಿಮೆ ಆದರೆ ಫೈಬರ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಕೆ ಅಧಿಕವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪು ಆಲ್ಫಾ-ಲಿಪೊಯಿಕ್ ಆಮ್ಲವನ್ನು ಸಹ ಹೊಂದಿರುವುದರಿಂದ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೆಂಡೆಕಾಯಿ ಕರಗುವ ನಾರಿನ ಶಕ್ತಿಶಾಲಿಯಾಗಿದ್ದು, ಇದು ಜೀರ್ಣಕ್ರಿಯೆಗೆ ಉತ್ತಮವಾದ ಆಹಾರವಾಗಿದೆ. ಹಾಗೆ ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಂದಹಾಗೆ ಬೆಂಡೆಕಾಯಿಯಲ್ಲಿ ಮೈರಿಸೆಟಿನ್ ನಂತಹ ಸಂಯುಕ್ತಗಳು ಇರುವುದರಿಂದ ಮಧುಮೇಹವನ್ನು ತಡೆಯಬಹುದು.
ಹಾಗಲಕಾಯಿಯು ಪಾಲಿಪೆಪ್ಟೈಡ್-ಪಿ ಮತ್ತು ಚರಂಟಿನ್ ಅನ್ನು ಹೊಂದಿರುತ್ತದೆ. ಇವೆರಡೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮಧುಮೇಹವನ್ನು ನಿರ್ವಹಿಸಲು ಈ ತರಕಾರಿ ಉಪಯುಕ್ತವಾಗಿದೆ.
ಬ್ರೊಕೊಲಿಯು ಸಲ್ಫೊರಾಫೇನ್ನಿಂದ ತುಂಬಿರುತ್ತದೆ. ಇದು ಉರಿಯೂತದ ಗುಣಲಕ್ಷಣಗಳು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಬ್ರೊಕೊಲಿ ಮಧುಮೇಹ ಸ್ನೇಹಿ ಆಹಾರವಾಗಿದೆ. ಇದರಲ್ಲಿ ಫೈಬರ್‌ನಂತಹ ಅಂಶಗಳು ಅಧಿಕವಾಗಿದ್ದು, ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಿ, ಸಕ್ಕರೆಯ ಏರಿಕೆಯನ್ನು ತಡೆಯುತ್ತದೆ.
ಸಾಮಾನ್ಯ ಆಲೂಗಡ್ಡೆಗಿಂತ ಭಿನ್ನವಾಗಿ, ಸಿಹಿ ಗೆಣಸು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ ಮತ್ತು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅವು ಸಕ್ಕರೆ ಮಟ್ಟವನ್ನು ಕ್ರಮೆಣವಾಗಿ ಬಿಡುಗಡೆ ಮಾಡುತ್ತದೆ. ಇದು ದೇಹದಲ್ಲಿನ ಗ್ಲೂಕೋಸ್ ಮಟ್ಟದ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)