ಕಾನ -ತೋಕೂರು -ಜೋಕಟ್ಟೆ ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಲಿಗೋರಿ ಜಾರ್ಜ್ ಮೊದಲಾದವರಿದ್ದರು. 
ನ್ಯೂಸ್

ರಸ್ತೆ ಅವ್ಯವಸ್ಥೆ ಸರಿಪಡಿಸಲು 15 ದಿನ ಗಡುವು

ಪ್ರಮುಖ ಮುಖ್ಯಾಂಶಗಳು

  • ಕಾನ -ತೋಕೂರು -ಜೋಕಟ್ಟೆ ಮಾರ್ಗ ದುರಸ್ತಿಗೆ ಒತ್ತಾಯ
  • ಡಿವೈಎಫ್‌ಐ ಕಾನ ಘಟಕ, ಆಟೋ ರಿಕ್ಷಾ ಚಾಲಕರ ಸಂಘ, ನಾಗರಿಕ ಹೋರಾಟ ಸಮಿತಿ ಕಾನ ನೇತೃತ್ವ
ಮಂಗಳೂರು: ಕಾನ -ತೋಕೂರು -ಜೋಕಟ್ಟೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಕಾನ ಜಂಕ್ಷನ್ ಬಳಿ ಡಿವೈಎಫ್‌ಐ ಕಾನ ಘಟಕ, ಆಟೋ ರಿಕ್ಷಾ ಚಾಲಕರ ಸಂಘ, ನಾಗರಿಕ ಹೋರಾಟ ಸಮಿತಿ ಕಾನ ನೇತೃತ್ವದಲ್ಲಿ ರಸ್ತೆ ತಡೆ ನಡೆಯಿತು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ಎಂಎಸ್‌ಜಡ್ ಮತ್ತು ಎಂಆರ್‌ಪಿಎಲ್ ಕಂಪನಿಗಳು ನಿರ್ವಹಿಸಬೇಕಾದ ಮುಖ್ಯ ರಸ್ತೆ ನಿರ್ಲಕ್ಷö್ಯಕ್ಕೆ ಒಳಗಾಗಿದೆ. ಜನಪ್ರತಿನಿಧಿನಗಳು ಕಂಪನಿಯವರ ಕಿವಿಹಿಂಡಿ ಕೆಲಸ ಮಾಡಿಸಲು ವಿಫಲರಾಗಿದ್ದಾರೆ. ಇದರ ಪರಿಣಾಮ ದಿನನಿತ್ಯ ರಸ್ತೆ ಅಪಘಾತ ಸಂಭವಿಸುತ್ತಿದೆ. ರಸ್ತೆ ಗುಂಡಿಯಿAದಾಗಿ ಅಪಘಾತ ಸಂಭವಿಸಿದಾಗ ಪೊಲೀಸರು ರಸ್ತೆಯ ನಿರ್ವಹಣೆ ಜವಾಬ್ದಾರಿ ವಹಿಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ 15 ದಿನಗೊಳಗಾಗಿ ಕಾನ-ಜೋಕಟ್ಟೆ ರಸ್ತೆ ದುರಸ್ತಿ ಆಗದಿದ್ದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸೆಕ್ರೆಡ್ ಹಾರ್ಟ್ ಚರ್ಚ್ ಉಪಾಧ್ಯಕ್ಷ ಲಿಗೋರಿ ಜಾರ್ಜ್, ಡಿವೈಎಫ್‌ಐ ನಗರ ಕಾರ್ಯದರ್ಶಿ ತಯ್ಯೋಬ್ ಬೆಂಗ್ರೆ, ಆಟೋ ರಿಕ್ಷಾ ಚಾಲಕರ ಸಂಘ ಅಧ್ಯಕ್ಷ ಅಬ್ದುಲ್ ಬಶೀರ್, ವಿವಿಧ ಸಂಘಟನೆಗಳ ಪ್ರಮುಖರಾದ ಅಬೂಬಕ್ಕರ್ ಬಾವ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಬಿ.ಕೆ.ಮಸೂದ್, ಅಜ್ಮಾಲ್ ಅಹ್ಮದ್, ಶ್ರೀನಾಥ್ ಕುಲಾಲ್, ಜಗದೀಶ್, ಅಬ್ದುಲ್ ರಹೀಂ, ಅಬೂಬಕ್ಕರ್ ಕೆ.ಪಿ, ಫ್ರಾನ್ಸಿಸ್ ಡಿಸೋಜ, ಮುಸ್ತಫಾ ಒಟ್ಟೆಕಾಯರ್, ಹಂಝ ಮೈಂದಗುರಿ, ಸುಧೀರ್ ಕೋಡಿಕೆರೆ, ಐ.ಮೊಹಮ್ಮದ್, ಇಬ್ರಾಹಿಂ ಹಳೆಮನೆ, ಹನೀಫ್ ಕುಳಾಯಿ, ನವಾಜ್ ಕುಳಾಯಿ, ಸಿರಾಜ್ ಮೈಂದಗುರಿ ಮೊದಲಾದವರು ಪಾಲ್ಗೊಂಡಿದ್ದರು.