ನ್ಯೂಸ್

ಆನ್‌ಲೈನ್ ವಂಚಕರಿಂದ ನಿವೃತ್ತ ಅಧಿಕಾರಿಯಿಂದ 47 ಲಕ್ಷ ರೂ. ವಂಚನೆ

ಮೈಸೂರು: ಮುಂಬೈ ಪೊಲೀಸರು ಹೆಸರಿನಲ್ಲಿ ಕರೆ ಮಾಡಿರುವ ವಂಚಕರು ನಿವೃತ್ತ ಅಧಿಕಾರಿಯೊಬ್ಬರಿಂದ 47 ಲಕ್ಷ ರೂ. ಹಣ ದೋಚಿದ್ದು, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ: ಆನ್‌ಲೈನ್ ವಂಚಕರು, ತಾವು ಮುಂಬೈ ಪೊಲೀಸರು ಎಂದು ಹೇಳಿದ್ದು, ನಿಮ್ಮ ಹೆಸರನಲ್ಲಿ ಬಂದಿರುವ ಪಾರ್ಸಲ್‌ನಲ್ಲಿ ಮಾದಕ ವಸ್ತುಗಳು ಇವೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ನಾವು ಹೇಳಿದ ಖಾತೆಗೆ ಹಾಕಬೇಕು. ತನಿಖೆ ಮುಗಿದ ನಂತರ ಹಣವನ್ನು ವಾಪಸ್ ಹಾಕುತ್ತೇವೆ ಎಂದು ಹೇಳಿದರು. ಅದರಂತೆ 47 ಲಕ್ಷ ರೂ. ಹಣ ಕಳುಹಿಸಿದ್ದು, ವಾಪಸ್ ಬಾರದೇ ಇರುವಾಗ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ನಿವೃತ್ತ ಅಧಿಕಾರಿ ದೂರು ನೀಡಿದ್ದಾರೆ.