ನ್ಯೂಸ್

ಶ್ರೀಲಂಕಾ ನೌಕಪಡೆಯಿಂದ 47 ಭಾರತೀಯ ಮೀನುಗಾರರ ಬಂಧನ: ಜೈ ಶಂಕರ್​ಗೆ ಪತ್ರ ಬರೆದ ಸಿಎಂ ಎಂ.ಕೆ.ಸ್ಟಾಲಿನ್| Fishermen Arrested

Fishermen Arrested: ಶ್ರೀಲಂಕಾ ನೌಕಾಪಡೆಯಿಂದ ಗುರುವಾರ(ಅ. 09) 47 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, ತಕ್ಷಣ ಬಿಡುಗಡೆ ಮಾಡಲು ಒತ್ತಡ ಹೇರುವಂತೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ವಿದೇಶಾಂಗ ಸಚಿವ ಜೈಶಂಕರ್​ಗೆ ಪತ್ರ ಬರೆದಿದ್ದಾರೆ.

ಬಂಧನ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಶ್ರೀಲಂಕನ್ ನೌಕಾಪಡೆಯ ವಕ್ತಾರರು, ದ್ವೀಪ ರಾಷ್ಟ್ರದ ನೀರಿನಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಶ್ರೀಲಂಕಾದ ತಲೈಮನ್ನಾರ್‌ನಲ್ಲಿ 47 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಬಂಧನವಲ್ಲದೇ,  ಮನ್ನಾರ್ ಮತ್ತು ಡೆಲ್ಫ್ಟ್ ಸಮುದ್ರ ಪ್ರದೇಶಗಳಲ್ಲಿ ನಡೆಸಿದ ಸಂಘಟಿತ ಗಸ್ತು ಕಾರ್ಯಾಚರಣೆಯ ಸಮಯದಲ್ಲಿ ಐದು ಟ್ರಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಉತ್ತರ ಶ್ರೀಲಂಕಾದ ಜಾಫ್ನಾ ಬಳಿ 12 ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ದೋಣಿಯನ್ನು ವಶಪಡಿಸಿಕೊಂಡ ಒಂದು ತಿಂಗಳ ನಂತರ ಇದು ಬಂದಿದೆ. ಇಂದು ಮತ್ತೆ 47 ಮಂದಿಯನ್ನು ಬಂಧಿಸಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧಗಳಲ್ಲಿ ಮೀನುಗಾರರಿಗೆ ಸಂಬಂಧಿಸಿದ ವಿಷಯವು ವಿವಾದದ ಮೂಲವಾಗಿಯೇ ಉಳಿದಿದೆ.  ಶ್ರೀಲಂಕಾ ನೌಕಾಪಡೆಯು ಕೆಲವು ಸಂದರ್ಭಗಳಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದೆ ಎಂಬ ವರದಿಗಳಿವೆ. (ಏಜೆನ್ಸೀಸ್)