ನಮ್ಮ ಮೆಟ್ರೋ 2ನೇ ಹಂತದ ಸುರಂಗ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಡೈರಿ ವೃತ್ತದಿಂದ ನಾಗವಾರವರೆಗೆ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದ್ದು, ಶಿವಾಜಿನಗರ ಮತ್ತು ಕಂಟೋನ್ಮೇಂಟ್ನಲ್ಲಿ ಈಗಾಗಲೆ ಸುರಂಗ ಕೊರೆಯುವ ಕಾರ್ಯ ಆರಂಭಿಸಲಾಗಿದೆ. ಟ್ಯಾನರಿ ರಸ್ತೆಯಿಂದ ನಾಗಸಂದ್ರವರೆಗಿನ ಸುರಂಗ ಮಾರ್ಗ ನಿರ್ಮಾಣಕ್ಕೆ ಶ್ರೀ ಚಾಲನೆ ನೀಡಲಾಗುತ್ತದೆ. ಅದಕ್ಕೂ ಮುನ್ನ ಆ ಮಾರ್ಗದಲ್ಲಿ ಬಳಸಲಾಗುವ ರಿಂಗ್ಗಳ ನಿರ್ಮಾಣಕ್ಕೆ ಬೈಯಪನಹಳ್ಳಿ ಯಾರ್ಡ್ನಲ್ಲಿ ಚಾಲನೆ ನೀಡಲಾಗಿದೆ. ಒಟ್ಟು 4,603 ರಿಂಗ್ಗಳನ್ನು ನಿಮಿರ್ಸಲಾಗುತ್ತಿದ್ದು, ಐಟಿಡಿ ಸಿಮೆಂಟೇಷನ್ ಇಂಡಿಯಾ ಸಂಸ್ಥೆ ಈ ಕಾರ್ಯ ಆರಂಭಿಸಿದೆ.
ಬೆಂಗಳೂರು: ಟ್ಯಾನರಿ ರಸ್ತೆಯಿಂದ ನಾಗವಾರವರೆಗೆ ನಿರ್ಮಾಣಗೊಳ್ಳಲಿರುವ ನಮ್ಮ ಮೆಟ್ರೋ 2ನೇ ಹಂತದ ಸುರಂಗ ಮಾರ್ಗದಲ್ಲಿ ಬಳಸಲಾಗುವ ರಿಂಗ್ಗಳ ನಿರ್ಮಾಣ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.