ಮುಂಬೈ: ಇತ್ತೀಚಿಗೆ ಬಿಡುಗಡೆ ಮಾಡಿದ ಹುರುನ್ ಶ್ರೀಮಂತರ 2024ರ ಪಟ್ಟಿಯಲ್ಲಿ ಬಾಲಿವುಡ್ನ ನಟಿ ಜೂಹಿ ಚಾವ್ಲಾ(Star Actress) ಬರೊಬ್ಬರಿ 4600 ಕೋಟಿ ರೂ. ನಿವ್ವಳ ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ ಎಂದು ಬಹಿರಂಗಗೊಂಡಿದೆ.
ಅಲ್ಲದೆ, ಬಾಲಿವುಡ್ನ ಐಶ್ವರ್ಯ ರೈ, ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಸೇರಿದಂತೆ ಇವರ ಸಹದ್ಯೋಗಿಗಳ ಒಟ್ಟು ಆಸ್ತಿಗಿಂತ ಚಾವ್ಲಾ ಅವರ ಆಸ್ತಿ ಅಧಿಕವಾಗಿದೆ. ಇದು ಎಲ್ಲರಿಗೂ ಆಶ್ಚರ್ಯವಾಗಿದೆ. ಈ ಬಗ್ಗೆ ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಜೂಹಿನ ವಿಚಾರಕ್ಕೆ ಬರುವುದಾದರೆ 80-90ರ ದಶಕದಲ್ಲಿ ಬಹು ಬೇಡಿಕೆಯ ನಟಿ. ಅಂದಿನ ಕಾಲದಲ್ಲಿ ಇವರ ಸಿನಿ ಜರ್ನಿ ಉತ್ತುಂಗದಲ್ಲಿತ್ತು. ಅಲ್ಲದೆ ನಟಿಸಿರುವ ಸಿನಿಮಾಗಳು ಒಂದರ ಮೇಲೆ ಒಂದರಂತೆ ಹಿಟ್ ಆಗಿದ್ದವು. 2000 ವರ್ಷದ ಬಳಿಕ ಹೇಳಿಕೊಳ್ಳುವಂತ ಸಿನಿಮಾಗಳು ಹಿಟ್ ಆಗಲಿಲ್ಲ. ನಿಧಾನವಾಗಿ ಸಿನಿಮಾಗಳಿಂದ ದೂರು ಸರಿದ ಜೂಹಿ, 2009 ರಿಂದ ಇವರೆಗೆ ಯಾವುದೇ ಸಿನಿಮಾಗಳು ಮಾಡಿಲ್ಲ. 2009 ರ ಹೊತ್ತಿಗೆ ಐಪಿಎಲ್ ಆರಂಭಗೊಂಡಿದ್ದು, ಶಾರುಕ್ ಖಾನ್ ಜತೆಗೆ ಕೋಲ್ಕತ್ತ ನೈಟ್ ರೈಡರ್ಸ್ ಪ್ರಾಂಚೈಸಿಯ ಸಹ ಮಾಲೀಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು.
ಇದನ್ನೂ ಓದಿ: Sri Lanka Election Result | ಎನ್ಪಿಪಿಗೆ ಒಲಿದ ಜಯ; ಸಂಸತ್ತಿನಲ್ಲಿ ಬಹುಮತ ಪಡೆದ ಅನುರ ಕುಮಾರ ಡಿಸ್ಸಾನಾಯಕೆ ನೇತೃತ್ವದ ಪಕ್ಷ
ಆಸ್ತಿಯ ಮೂಲ
ಜೂಹಿ ಅವರು ನಟನೆಯಿಂದ ಮತ್ತು ವಿವಿಧ ವ್ಯಾಪರ ಉದ್ಯಮಗಳ ಮೂಲಗಳಿಂದ ಹಣ ಬಂದಿದೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಗ್ರೂಪ್ನ ಸಹ-ಸಂಸ್ಥಾಪಕಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಹಲವಾರು ಕ್ರಿಕೆಟ್ ತಂಡಗಳು ಸಹ-ಮಾಲೀಕರು ಆಗಿದ್ದಾರೆ. ಶಾರುಖ್ಖಾನ್, ಜೂಹಿ ಚಾವ್ಲಾ ಮತ್ತು ಅವರ ಪತಿ ಜೇ ಮೆಹ್ತಾ ಅವರು 2007 ರಲ್ಲಿ ತಂಡವನ್ನು 75.09 ಮಿಲಿಯನ್‌ಗೆ ಖರೀದಿಸಿದ್ದರು. ಅಂದರೆ ಸುಮಾರು 623 ಕೋಟಿ ರೂ.ಗೆ ಫೋರ್ಬ್ಸ್ ಪ್ರಕಾರ, ತಂಡದ ಪ್ರಸ್ತುತ ಮೌಲ್ಯವು 1.1 ಬಿಲಿಯನ್ ಡಾಲರ್ ಆಗಿದೆ, ಅಂದರೆ 9,139 ಕೋಟಿ ರೂ.ಆಗಿದೆ.
ಬಾಲಿವುಡ್ನ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿರು ಜೂಹಿ ಚಾವ್ಲಾ, ನಾನು ಚಿಕ್ಕವಳಾಗಿದ್ದಾಗ ನಮ್ಮ ಶಾಲೆಯಲ್ಲಿ ಕೇಳುತ್ತಿದ್ದರು. ದೊಡ್ಡವಳಾದ ಮೇಲೆ ಏನಾಗುತ್ತಿಯಾ ಎಂದು. ಅದಕ್ಕೆ ನಾನು ಪ್ರತಿಸಾರಿ ಇದನ್ನೇ ಹೇಳುತ್ತಿದೆ. ಸಂತೋಷವಾಗಿ ಆರೋಗ್ಯದಿಂದ ಶ್ರೀಮಂತವಾಗಿ ಪ್ರಸಿದ್ಧವಾಗಬೇಕು ಎಂದು. ಈಗ ಅವಕಾಶ ಸಿಕ್ಕಿದೆ ನಾನು ಬಳಸಿಕೊಂಡಿದ್ದೇನೆ ಎಂದು ಹೇಳಿದ್ದರು. ಇಂದು ಅದು ನಿಜಾಗಿದೆ, (ಏಜೆನ್ಸೀಸ್).