ನ್ಯೂಸ್

ಬರೋಬ್ಬರಿ 47 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಯ್ತು ಚಿನ್ನದ ಕ್ರಿಸ್​ಮಸ್​ ಟ್ರೀ! Christmas Tree

ಜರ್ಮನ್​: ( Christmas tree  ) ಕ್ರಿಸ್​ಮಸ್​ ಹಬ್ಬ ತಯಾರಿ ಜೋರಾಗಿದೆ. ಈಗಾಗಲೇ ಮಾಲ್​​ ಹಾಗೂ ಕೆಲವು ಅಂಗಡಿ ಮುಗ್ಗಟ್ಟುಗಳು ವಿಶೇಷ ರೀತಿಯಲ್ಲಿ ಸಿದ್ಧಗೊಂಡಿವೆ. ಜರ್ಮನಿಯಲ್ಲಿ ನಿರ್ಮಾಣಗೊಂಡಿರುವ ಚಿನ್ನದ ಕ್ರಿಸ್​ಮಸ್​ ಟ್ರೀ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​​ ಸುದ್ದಿಯಲ್ಲಿದೆ.

2024 ವಿಯೆನ್ನಾ ಫಿಲ್ಹಾರ್ಮೋನಿಕ್ ಚಿನ್ನದ ನಾಣ್ಯಗಳಿಂದ ಇದು ಸಿದ್ಧಗೊಂಡಿದೆ. ಚಿನ್ನದಿಂದ ಸಿದ್ಧಗೊಂಡಿರುವ ಕ್ರಿಸ್​ಮಸ್ ಬರೋಬ್ಬರಿ 63 ಕೆಜಿ ತೂಕ ಇದೆ. ಸುಮಾರು 47 ಕೋಟಿ ರೂಪಾಯಿ ವೆಚ್ಚ ತಗುಲಿದೆ ಎಂದು ಹೇಳಲಾಗುತ್ತಿದೆ.ಈ ಸ್ವರ್ಣ ಲೇಪಿತ ಕ್ರಿಸ್​ಮಸ್ ಟ್ರೀಯನ್ನು ಮೂನಿಚ್ ಮೂಲದ ಚಿನ್ನದ ವ್ಯಾಪಾರಿ ಪ್ರೊ ಅರುಮ್ ಎಂಬುವವರು ನಿರ್ಮಿಸಿದ್ದಾರೆ.

ಬರೋಬ್ಬರಿ 10 ಅಡಿ ಎತ್ತರವಿರುವ ಈ ಗಿಡವು ಮಾರಲು ಅಂತ ನಿರ್ಮಿಸಿದ್ದಲ್ಲ. ಇದನ್ನು ಮೂನಿಚ್​ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದು ನಮ್ಮ ಕಂಪನಿಯ 35ನೇ ವಾರ್ಷಿಕೋತ್ಸವದ ಗೌರವವಾಗಿ ಗುರುತಿಸಲ್ಪಡಲಿದೆ.

2010ರಲ್ಲಿ ಅಬುದಾಬಿಯ ಎಮಿರೆಟ್ಸ್​ ಪ್ಯಾಲೆಸ್​ನಲ್ಲಿ ನಿರ್ಮಿಸಲಾಗಿದ್ದ ಸುಮಾರು 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕ್ರಿಸ್​ಮಸ್ ಟ್ರೀ 181 ಚಿನ್ನದ ಆಭರಣಗಳಿಂದ ಸಿದ್ಧಗೊಳಿಸಲಾಗಿತ್ತು. ಅದರ ಎತ್ತರ 43.2 ಫೀಟ್​ನಷ್ಟು ಇತ್ತು ಇದು ಗಿನ್ನಿಸ್ ಬುಕ್ ರೆಕಾರ್ಡ್​​ನಲ್ಲಿ ವಿಶ್ವ ದಾಖಲೆಯಾಗಿ ಸೇರ್ಪಡೆಯಾಗಿದೆ.