Marries: ಅಪಘಾನಿಸ್ತಾನದಲ್ಲಿ 6 ವರ್ಷದ ಬಾಲಕಿಯನ್ನು ಮದುವೆಯಾದ 45 ವರ್ಷದ ವ್ಯಕ್ತಿ ಮದುವೆಯಾಗಿರುವ ಘಟನೆ ವರದಿಯಾಗಿದೆ.
ದಕ್ಷಿಣ ಅಪಘಾನಿಸ್ತಾನದ ಮಾರ್ಜಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪತ್ನಿಯರನ್ನು ಹೊಂದಿರುವ ಈ ವ್ಯಕ್ತಿ ಬಾಲಕಿಯ ಕುಟುಂಬಕ್ಕೆ ಹಣ ನೀಡಿ ಆ ಬಾಲಕಿಯನ್ನು ಮದುವೆಯಾಗಿದ್ದಾನೆ ಎಂದು ಅಮೆರಿಕಾದ ಮೂಲದ ಅಫ್ಘಾನ್ ಮಾಧ್ಯಮ AMU.TV ವರದಿ ಮಾಡಿದೆ.
ಇದನ್ನೂ ಓದಿ:ಲಿಫ್ಟ್ ಬಾಗಿಲು ತೆರೆದಿಲ್ಲ ಎಂದು 12 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಿ ಕೈಗೆ ಕಚ್ಚಿದ ವ್ಯಕ್ತಿ | Lift Door
ಚಿಕ್ಕ ಬಾಲಕಿಯ ಮದುವೆ ಬಗ್ಗೆ ಕೆಲವರು ಆರೋಪ ಮಾಡಿದ ಹಿನ್ನೆಲೆ ಮಧ್ಯಪ್ರವೇಶಿಸಿದ ತಾಲಿಬಾನ್, ಆ ವ್ಯಕ್ತಿಯನ್ನು ಮತ್ತು ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ. ಮುಂದಿನ ಮೂರು ವರ್ಷದ ವರೆಗೆ(9ನೇ ವಸ್ಸಿನ ತನಕ) ಬಾಲಕಿಯನ್ನು ವಿವಾಹವಾದ ವ್ಯಕ್ತಿ ಕರೆದೊಯ್ಯುವಂತಿಲ್ಲ ಎಂದು ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.
ಇನ್ನು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಹುಟ್ಟು ಹಾಕಿದ್ದು, ನೆಟ್ಟಿಜನ್ ಕಳವಳ ವ್ಯಕ್ತಪಡಿದ್ದಾರೆ. ಅಲ್ಲದೆ, ಈ ಘಟನೆ ವಿರುದ್ಧ ತರೇಹವಾರಿ ಕಾಮೆಂಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್)