ನ್ಯೂಸ್

ಒಂದೇ ದಿನ 45 ಡಿವೈಎಸ್‌ಪಿಗಳ ವರ್ಗಾವಣೆ; ನಿಮ್ಮ ಪ್ರದೇಶಕ್ಕೆ ಯಾರು?: ಇಲ್ಲಿದೆ ಪೂರ್ತಿ ಪಟ್ಟಿ

ಬೆಂಗಳೂರು: ರಾಜ್ಯ ಗೃಹ ಇಲಾಖೆಯಲ್ಲಿ ಕಳೆದ ಕೆಲವು ದಿನಗಳಿಂದ ಮಹತ್ವದ ಬೆಳವಣಿಗೆಗಳು ಆಗಲಾರಂಭಿಸಿದ್ದು, ಇದೀಗ ಇನ್ನೊಂದು ಹಂತದ ದಂಡಿ ವರ್ಗಾವಣೆ ಮಾಡಲಾಗಿದೆ.

ಇತ್ತಿಚಿನ ದಿನಗಳಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಇವತ್ತೊಂದೇ ದಿನ 45 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದೂ ಸೂಚಿಸಲಾಗಿದ್ದು, ಈ ಕೆಳಗಿನ‌ ಪಟ್ಟಿಯಲ್ಲಿ ವರ್ಗಾವಣೆ ಆಗಿರುವ ಡಿವೈಎಸ್‌ಪಿ ಮತ್ತು ಅವರ ಹೊಸ ಕಾರ್ಯಸ್ಥಾನಗಳನ್ನು ನಮೂದಿಸಲಾಗಿದೆ.