ನವದೆಹಲಿ: ಕರೊನಾ ವೈರಸ್ ನವಜಾತ ಶಿಶುಗಳಿಗೆ ತಗುಲುತ್ತಿರುವುದು ಆತಂಕದ ವಿಚಾರವಾಗಿದೆ. ಈಗ ಈ ಕರೊನಾ ವೈರಸ್ನಿಂದಾಗಿ 45 ದಿನಗಳ ಹೆಣ್ಣುಶಿಶುವಿನ ಪ್ರಾಣ ಹೋಗಿದೆ.
ದೇಶದಲ್ಲಿ ಕರೊನಾ ವೈರಸ್ನಿಂದ ಮೃತಪಟ್ಟ ಅತ್ಯಂತ ಕಿರಿಯ ಪೇಶೆಂಟ್ ಈ ನವಜಾತ ಶಿಶು. ಏ.14ರಂದು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಸೋಂಕು ಇರುವುದು ಏಪ್ರಿಲ್ 16ರಂದು ದೃಢಪಟ್ಟಿತ್ತು.
ಇದುವರೆಗೆ ದೇಶಾದ್ಯಂತ ಅನೇಕ ನವಜಾತ ಶಿಶುಗಳಲ್ಲಿ, ಮಕ್ಕಳಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ 8 ದಿನಗಳ ಮಗುವಿಗೆ ಕರೊನಾ ಸೋಂಕು ತಗುಲಿದ್ದು ವರದಿಯಾಗಿದೆ. (ಏಜೆನ್ಸೀಸ್)