ಬೆಂಗಳೂರು: ಆದಾಯ, ಜಾತಿ ಮತ್ತು ಆದಾಯ, ವಾಸಸ್ಥಳ ಪ್ರಮಾಣಪತ್ರ ಸೇರಿದಂತೆ 44 ಸೇವೆಗಳು(44 services of Ataljee Center are available in all Bapuji Centers) ಜನರಿಗೆ ಇನ್ನೂ ಹತ್ತಿರವಾಗಲಿವೆ.
ಅಟಲ್ ಜೀ ಸೇವಾ ಕೇಂದ್ರ(ನಾಡಕಚೇರಿ)ಗಳಲ್ಲಿ ದೊರೆಯುತ್ತಿದ್ದ ಈ ಸೇವೆಗಳನ್ನು ಇನ್ನು ಮುಂದೆ ಎಲ್ಲ ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರದಲ್ಲೇ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.
ಈಗಾಗಲೇ 1239 ಗ್ರಾಮ ಪಂಚಾಯಿತಿಗಳಲ್ಲಿ ಈ ಸೇವೆ ದೊರೆಯುತ್ತಿದ್ದು, ಉಳಿದ ಎಲ್ಲ ಪಂಚಾಯಿತಿಗಳಲ್ಲೂ ಈ ಸೇವೆಯನ್ನು ಒದಗಿಸುವಂತೆ ಸೂಚಿಸಲಾಗಿದೆ.
ಈ ಸೇವೆ ಒದಗಿಸಲು ಪೂರಕವಾಗಿ ಪಂಚತಂತ್ರ 2.9 ತಂತ್ರಾಂಶವನ್ನು ನಾಡಕಚೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದೆ. ಹಾಗಾಗಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಸೇವೆಗಳಿಗೆ ಅರ್ಜಿ ಸಲ್ಲಿಸಿ, ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಸೇವೆಗಳನ್ನು ಪಡೆಯಬಹುದಾಗಿದೆ.