ನ್ಯೂಸ್

ರಾಜ್ಯದಲ್ಲಿ 43 ಸೈಬರ್ ಪೊಲೀಸ್ ಠಾಣೆ; ಆನ್ ಲೈನ್ ವಂಚನೆ ತಡೆಯಲು ಕ್ರಮ

Bengaluru - Political - Shivananda Tagadur

ಬೆಂಗಳೂರು:
ಸೈಬರ್ ವಂಚನೆಗೊಳಗಾದ ಶೋಷಿತರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಸೇರಿ ಒಟ್ಟು 43 ಸೈಬರ್ (ಸಿಇಎನ್)ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಆನ್ ಲೈನ್ ಉದ್ಯೋಗ ನೀಡುವುದಾಗಿ 1820 ವಂಚನೆ ಪ್ರಕರಣಗಳು ವರಿದಿಯಾಗಿದ್ದು, 178.18 ಕೋಟಿ ರೂ ವಂಚನೆಯಾಗಿದೆ. ಅದರಲ್ಲಿ 157.13 ಲಕ್ಷ ರೂ ರಿಕವರಿ ಮಾಡಿ ಕೊಡಲಾಗಿದೆ. ಕಳೆದ ವರ್ಷ 4470 ಪ್ರಕರಣ ವರದಿಯಾಗಿದ್ದು, ಅದರಲ್ಲಿ 1036 ಪ್ರಕರಣ ಇತ್ಯರ್ಥ ಮಾಡಲಾಗಿದೆ ಎಂದರು.
ನಕಲಿ ಆ್ಯಪ್ ಮೂಲಕ ವಂಚನೆ ಮಾಡಿದ್ದರಲ್ಲಿ 134 ಪ್ರಕರಣ ದಾಖಲಾಗಿದ್ದು, ಅದರಲ್ಲಿ 11 ಪ್ರಕರಣ ಇತ್ಯರ್ಥ ಮಾಡಲಾಗಿದೆ ಎಂದರು.
ನಕಲಿ ಆ್ಯಪ್ ಮತ್ತು ಆನ್ ಲೈನ್ ವಂಚನೆಯನ್ನು ಕೂಡಲೆ ಗಂಭೀರವಾಗಿ ಗಮನಹರಿಸಿ ಕಡಿವಾಣ ಹಾಕಬೇಕು ಎಂದು ಸದಸ್ಯೆ ಉಮಾಶ್ರೀ ಒತ್ತಾಯಿಸಿದರು.

ಗ್ಯಾರಂಟಿಗೆ 52 ಸಾವಿರ ಕೋಟಿ
ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಮೀಸಲಿಟ್ಟಿದ್ದು, ಈ ತನಕ 11,752 ಕೊಟಿ ರೂ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಜೆಡಿಎಸ್‌ನ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿ, ಕಳೆದ ವರ್ಷ 37257 ಕೋಟಿ ಮೀಸಲಿರಿಸಿದ್ದು, 34,859 ಕೋಟಿ ರೂ ವೆಚ್ಚವಾಗಿದೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಾಗಿ ಆಸ್ತಿಗಳ ನಗದೀಕರಣ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಭಾನಾಯಕ ಬೋಸರಾಜು ಉತ್ತರಿಸಿದರು.