ನ್ಯೂಸ್

4,120 ಹೊಸ ಸೋಂಕಿತರು; 91 ಜನರ ಸಾವು; ರಾಜ್ಯದಲ್ಲಿ ಅಂಕೆಗೆ ಸಿಗುತ್ತಿಲ್ಲ ಕರೊನಾ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಇಂದು ಕೂಡ ನಾಲ್ಕು ಸಾವಿರ ದಾಟಿದೆ. ಶನಿವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಒಟ್ಟು 4,120 ಜನರಲ್ಲಿ ಸೋಂಕು ಕಂಡು ಬಂದಿದೆ.

ರಾಜ್ಯದಲ್ಲಿ ಒಟ್ಟಾರೆ ಕೋವಿಡ್​ ರೋಗಿಗಳ ಪ್ರಮಾಣ 63,772ಕ್ಕೆ ಏರಿದೆ. ಈ ಪೈಕಿ ಪ್ರಸ್ತುತ ಸಕ್ರಿಯ ರೋಗಿಗಳ ಸಂಖ್ಯೆ 39,370 ಆಗಿದೆ. ಇಂದು ಮೃತಪಟ್ಟವರ ಸಂಕ್ಯೆ 91 ಆಗಿದೆ. ಒಟ್ಟು ಸಾವಿನ ಸಂಖ್ಯೆ 1,331ಕ್ಕೆ ತಲುಪಿದೆ. ಮರಣದ ಪ್ರಮಾಣ ಶೇ.2.8ಕ್ಕೆ ಏರಿಕೆಯಾಗಿದೆ.

ಕಳೆದ 24 ತಾಸುಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ 1,290. ಈವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆ ಕಂಡವರು 23,065 ಮಂದಿ. ಇದರ ಶೇಕಡಾವಾರು ಪ್ರಮಾಣ 36.1 ಆಗಿದೆ.

ಇನ್ನು, ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,156. ಅಲ್ಲಿಗೆ ಸತತ ನಾಲ್ಕನೇ ದಿನವೂ ಕೋವಿಡ್​ ಪ್ರಮಾಣ ಎರಡು ಸಾವಿರದ ಗಡಿ ದಾಟಿಸಂತಾಗಿದೆ.ಒಟ್ಟು ಸೋಂಕಿತರ ಸಂಖ್ಯೆ 31,777 ಆಗಿದೆ. ಮತ್ತೆ 36 ಜನರು ಮೃತಪಡುವ ಮೂಲಕ ಒಟ್ಟಾರೆ ಸಾವಿಗೀಡಾದವರು 697 ಜನರು.

ಜಿಲ್ಲಾವಾರು ಕೋವಿಡ್ ಅಂಕಿ- ಸಂಖ್ಯೆಗಳ ವಿವರ