ಕಡೂರು ತಾಲೂಕಿನ ಮತಿಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ರಾಜಪ್ಪ, ಕುಶಕುಮಾರ್ ಉದ್ಘಾಟಿಸಿದರು. ಕೆ.ಎಂ.ಈಶ್ವರಪ್ಪ, ನವೀನ್, ಸುರೇಶ್, ದಿನೇಶ್ ಮತ್ತಿತರರಿದ್ದರು. 
ನ್ಯೂಸ್

4.8 ಲಕ್ಷ ರೂ. ಲಾಭಾಂಶ

ಕಡೂರು: ಷೇರುದಾರರ ಸಹಕಾರದಿಂದ ಸಂಘ ಸಾಲ ಮರುಪಾವತಿಯಲ್ಲಿ ಪ್ರಗತಿ ಹೊಂದಿ 4.8 ಲಕ್ಷ ರೂ.ಗೂ ಹೆಚ್ಚು ಲಾಭ ಗಳಿಸಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಸಿ.ಎಚ್.ಕುಶಕುಮಾರ್ ತಿಳಿಸಿದರು.

ಮತಿಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ ರೈತರಿಗೆ ಪೂರಕವಾಗಿ ಸುಮಾರು 7 ಲೋಡ್‌ನಷ್ಟು ಯೂರಿಯಾ ಗೊಬ್ಬರ ಮಾರಾಟ ಮಾಡಲಾಗಿದೆ. ಇದುವರೆಗೂ ಸುಮಾರು 9 ಕೋಟಿ ರೂ. ಷೇರುದಾರರಿಗೆ ಸಾಲ ವಿತರಿಸಲಾಗಿದ್ದು ಶೇ.99ರಷ್ಟು ಸಾಲ ಮರುಪಾವತಿಯಲ್ಲಿ ನವೀಕರಣಗೊಂಡಿದೆ ಎಂದರು.

ಸಂಘದ ಅಧ್ಯಕ್ಷ ರಾಜಪ್ಪ ಮಾತನಾಡಿ, ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಹಕಾರ ಹೆಚ್ಚಿನದಾಗಿದೆ. ಷೇರುದಾರರ ಹಿತಕಾಪಾಡಲು ಸಂಘದಿಂದ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷೆ ಗಂಗಮ್ಮ ರವಿಕುಮಾರ್, ನಿರ್ದೇಶಕರಾದ ಸಿ.ಪಿ.ಪ್ರಕಾಶ್, ನಟರಾಜ್, ಕೆ.ಎಂ.ಈಶ್ವರಪ್ಪ, ನವೀನ್, ದಿನೇಶ್, ಜಯಮ್ಮ, ಸುರೇಶ್, ಲಕ್ಷ್ಮೀಬಾಯಿ ತಿಮ್ಮನಾಯ್ಕ, ಸಂಘದ ಸಿಇಒ ಚೇತನ್, ಮುಖಂಡರಾದ ಕೆ.ಟಿ.ದೇವೇಂದ್ರಪ್ಪ, ಲಕ್ಷ್ಮಣಪ್ಪ, ಶ್ರೀನಿವಾಸ್‌ಮೂರ್ತಿ ಮತ್ತಿತರರಿದ್ದರು.