ಬಾಳೆಹೊನ್ನೂರು: ಬಾಳೆಹೊನ್ನೂರು ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ 2022-23ನೇ ಸಾಲಿನಲ್ಲಿ 4.64 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ.ವೆಂಕಟೇಶ್ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಹಕಾರ ಸಂಘವು ಕಳೆದ 9 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಸಹಕಾರಿ ತತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡು ಮುನ್ನಡೆದಿದೆ. ಗ್ರಾಹಕರ, ಷೇರುದಾರರ ನಿರಂತರ ವ್ಯವಹಾರದಿಂದ ಸಹಕಾರಿಯು ಲಾಭದಲ್ಲಿ ಮುನ್ನಡೆದಿದೆ. ಗ್ರಾಹಕರು, ಷೇರುದಾರರಿಗೆ ಮುಂದಿನ ದಿನಗಳಲ್ಲಿ ಸಹಕಾರಿಯಿಂದ ಇನ್ನಷ್ಟು ಸೌಲಭ್ಯ ಲಭಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಉಪಾಧ್ಯಕ್ಷ ಕೆ.ಕೆ.ವೆಂಕಟೇಶ್, ನಿರ್ದೇಶಕರಾದ ಎಚ್.ಕೆ.ವೆಂಕಟೇಶ್, ಎಚ್.ಆರ್.ನಾರಾಯಣಗೌಡ, ಡಿ.ಎನ್.ಜಗದೀಶ್, ಇರ್ಷಾದ್ ಅಹ್ಮದ್ ಖಾನ್, ಸತೀಶ್, ಎ.ಆರ್.ಸುರೇಂದ್ರ, ಎಂ.ಎಲ್.ಸುಮಿತ್ರ, ಶಶಿಕಲಾ, ಎಂ.ಎಲ್.ಮಂಜೇಶ್, ಬಿ.ಎಸ್.ಶ್ರೀನಿವಾಸ್, ಬಿ.ಟಿ.ಧರ್ಮರಾಜು, ಸಿಇಒ ಸೂರ್ಯನಾರಾಯಣ, ಸಿಬ್ಬಂದಿ ಪಿ.ಡಿ.ದಿವಿನ್, ಬಿ.ವಿ.ವಿಮರ್ಶ ಇತರರಿದ್ದರು.