ಚಿಕ್ಕೋಡಿ: ಜೈನಾಪುರದ ಅರಿಹಂತ ಸಕ್ಕರೆ ಕಾರ್ಖಾನೆ ಪ್ರಸಕ್ತ ವರ್ಷ 4.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆ ನಿರ್ದೇಶಕ ಉತ್ತಮ ಪಾಟೀಲ ಹೇಳಿದ್ದಾರೆ.
ಕಾರ್ಖಾನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಬ್ಬು ನುರಿಸುವ ಬಾಯ್ಲರ್ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರಿಗೆ ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ದರ ನೀಡಲಾಗಿದೆ. ಯರಗಟ್ಟಿ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಅರಿಹಂತ ಶುಗರ್ ಇಂಡಸ್ಟ್ರಿಯಲ್ ಲಿಮಿಟೆಡ್ ಮುನ್ನಡೆಸಲಿದ್ದು, ಈ ಹಂಗಾಮಿನಲ್ಲಿಯೇ ಕಬ್ಬು ನುರಿಸುವ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ನೆರೆ ಹಾವಳಿಯಿಂದ ಗಡಿತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಹಾನಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ರೈತರು ನಿತ್ಯ 3-4 ಟನ್ ಕಬ್ಬನ್ನು ಕಾರ್ಖಾನೆಗೆ ನುರಿಸಲು ಕಳುಹಿಸುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಶೀಘ್ರ ಡಿಸ್ಟ್ರಿಲರಿ, ಇಥೆನಾಲ್ ಉತ್ಪಾದನಾ ಘಟಕ ಹಾಗೂ ಕಾರ್ಖಾನೆ ಆವರಣದಲ್ಲಿ ಆಕ್ಸಿಜನ್ ಘಟಕ ಆರಂಭಿಸಲಾಗುವುದು ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಸುಭಾಷ ಜೋಷಿ, ಜಿಪಂ ಮಾಜಿ ಸದಸ್ಯರಾದ ರಾಜೇಂದ್ರ ಪವಾರ, ಮಹೇಶ ಭಾತೆ, ಸ್ನೇಹಲತಾ ಪಾಟೀಲ, ಸುರೇಖಾ ನಾಯಕ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಗಾಡಿವಡ್ಡರ, ಮಾಜಿ ಉಪಾಧ್ಯಕ್ಷ ಸುನೀಲ
ಪಾಟೀಲ, ರವಿ ಮಾಳಿ, ರಾಜು ಚೌಗಲಾ, ರೋಹನ ಭೀವಶಿ, ಸುರೇಶ ಖೋತ, ಮೀನಾಕ್ಷಿ ಪಾಟೀಲ, ಧನಶ್ರೀ ಪಾಟೀಲ, ವಿನಯಶ್ರೀ ಪಾಟೀಲ, ಆನಂದ ಗಿಂಡೆ, ನಿರಂಜನ ಪಾಟೀಲ, ದೀಪಾಲಿ ಪಾಟೀಲ, ಮುಖ್ಯ ಕೃಷಿ ಅಧಿಕಾರಿ ಎಸ್.ಎ.ಚೌಗಲೆ, ಆರ್.ಕೆ.ಶೆಟ್ಟಿ ಇದ್ದರು.
ಅರಿಹಂತ ಚಾರಿಟೇಬಲ್ ವತಿಯಿಂದ ಬೆಳಗಾವಿಯಲ್ಲಿ ಶೀಘ್ರ ಉನ್ನತ ದರ್ಜೆಯ ಆಸ್ಪತ್ರೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಜತೆಗೆ, ನಮ್ಮ ಸಹಕಾರಿ ಸಿಬ್ಬಂದಿಯನ್ನು ವಿಮೆ ವ್ಯಾಪ್ತಿಗೆ ಒಳಪಡಿಸಿ, ಅವರಿಗೆ ಆರೋಗ್ಯ ಸೇವೆ ನೀಡಲಾಗುವುದು.| ಉತ್ತಮ ಪಾಟೀಲ ಕಾರ್ಖಾನೆ ನಿರ್ದೇಶಕ