ನ್ಯೂಸ್

37 ನೇ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿ

ಮೈಸೂರು: ಆಲ್ ಇಂಡಿಯಾ ಚೆಸ್ ಫೆಡರೇಷನ್ ವತಿಯಿಂದ ಎಂಎಂ ಚೆಸ್ ಡೆವಲಪ್ಮೆಂಟ್ ಟ್ರಸ್ಟ್, ಮೈಸೂರು ಚೆಸ್ ಸೆಂಟರ್, ತುಮಕೂರು ಚೆಸ್ ಅಕಾಡೆಮಿ, ಮಂಡ್ಯ ಚೆಸ್ ಅಕಾಡೆಮಿ ಸಹಯೋಗದಲ್ಲಿ ವಿಜಯನಗರ ಸಂಭ್ರಮ ಕನ್‌ವೆನ್ಷನ್ ಹಾಲ್‌ನಲ್ಲಿ ಭಾನುವಾರ ಆರಂಭಗೊಂಡ 37 ನೇ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯ 8 ವರ್ಷ ವಯೋಮಾನದ ವಿಭಾಗದಲ್ಲಿ ಕರ್ನಾಟಕದ ಇ. ಪೂಜಿತಾ, ದರ್ಶ್ವಿ ರಾಯ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಟೂರ್ನಿಯ ಅಗ್ರ ಶ್ರೇಯಾಂಕಿತರಾದ ತಮಿಳುನಾಡಿನ ಆರ್. ಆರಣ್ಯ, ಆದ್ಯ ಇಷಾನಾ, ಹೊಸದಿಲ್ಲಿಯ ಅದಿರಾ ಮುಖರ್ಜಿ, ಆಂಧ್ರಪ್ರದೇಶದ ಅರಿಸಾಪು ವೇದಾಂಶಿ, ತಮಿಳುನಾಡಿನ ಎಸ್. ಆರ್ಷಿತಾ ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ಇನ್‌ಸೈಟ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್‌ಕುಮಾರ್ ಟೂರ್ನಿಗೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಜಿಲ್ಲಾ ಗವರ‌್ನನ್ ಸುಬ್ರಹ್ಮಣ್ಯ, ಕರ್ನಾಟಕ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಎಂ. ನಾಗೇಂದ್ರ, ಮಧುಕರ್ ಇತರರಿದ್ದರು.