ನ್ಯೂಸ್

364 ವಿದ್ಯಾರ್ಥಿಗಳು ಕ್ರೀಡಾಕೋಟಾ ಸೀಟು ಪಡೆಯಲು ಅನರ್ಹರು

364 ವಿದ್ಯಾರ್ಥಿಗಳು ಕ್ರೀಡಾಕೋಟಾ ಸೀಟು ಪಡೆಯಲು ಅನರ್ಹರು

  • ಬೆಂಗಳೂರು
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಸಿಇಟಿ-2020ರಲ್ಲಿ ಕ್ರೀಡಾ ಕೋಟಾದಡಿ ಸೀಟು ಪಡೆಯಲು 364 ವಿದ್ಯಾರ್ಥಿಗಳು ಅನರ್ಹರಾಗಿದ್ದಾರೆ.
    ಸಿಇಟಿಯಲ್ಲಿ ಕೀಡಾ ಕೋಟಾದಡಿ ಸೀಟು ಪಡೆಯಲು 580 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಬಹುತೇಕ ವಿದ್ಯಾರ್ಥಿಗಳು ಅರ್ಹ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಕೆಇಎ 216 ವಿದ್ಯಾರ್ಥಿಗಳಿಗೆ ಅರ್ಹತೆ ನೀಡಿ ಉಳಿದ 364 ವಿದ್ಯಾರ್ಥಿಗಳನ್ನು ಅನರ್ಹಗೊಳಿಸಿದ್ದಾರೆ. ಈ ಅರ್ಹ ಮತ್ತು ಅನರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಕೆಇಎ ತನ್ನ ವೆಬ್‌ಸೈಟ್ ಠಿಠಿ://್ಚಛಿಠಿಟ್ಞ್ಝಜ್ಞಿಛಿ.ಚ್ಟ್ಞಠಿ.ಜಟ.ಜ್ಞಿ/ಛಿ/ನಲ್ಲಿ ಬಿಡುಗಡೆ ಮಾಡಿದೆ. ಸಿಇಟಿನಲ್ಲಿ ಈ ಕ್ರೀಡಾ ಕೂಟದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ಇದ್ದು, ಈ ಹಿನ್ನೆಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಈ ಕೋಟಾದ ಸೀಟು ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ. ಕೆಇಎ ಸೀಟು ನೀಡಬೇಕಾದಲ್ಲಿ ಸಾಕಷ್ಟು ಮಾನದಂಡಗಳನ್ನು ನಿಗದಿ ಪಡಿಸಿದ್ದು, ಅಭ್ಯರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಬಹುತೇಕ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ, ಕಾಲೇಜು ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೋಟಾದ ಮೀಸಲಾತಿ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ. ಇದರಿಂದ ಅಂತಹ ಅರ್ಜಿಗಳನ್ನು ಕೆಇಎ ಅನರ್ಹಗೊಳಿಸಿರುತ್ತದೆ.
    2020ನೇ ಸಾಲಿಗೆ ಒಟ್ಟಾರೆ 1.94 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಜೆಇಇ, ಕಾಮೆಡ್‌ಕೆ ಸೇರಿದಂತೆ ಹಲವಾರು ಪರೀಕ್ಷೆಗಳ ಮೂಲಕ ವಿವಿಧ ಕಡೆ ಪ್ರವೇಶ ಪಡೆದುಕೊಳ್ಳಲಿದ್ದು, ಈ ವರ್ಷ 94,815 ವಿದ್ಯಾರ್ಥಿಗಳು ದಾಖಲೆಗಳನ್ನು ಅಪ್‌ಲೋಡ್ ವಾಡಿದ್ದಾರೆ.