ಅದೇ ರೀತಿ ಅಕ್ಟೋಬರ್ 22ರಂದು ಒಂದೇ ದಿನ 52 ವಾಯುಸಂಚಾರ ಚಲನೆ (ಎಟಿಎಂ) ಮಾಡಲಾಯಿತು. ಅದು ನೂತನ ದಾಖಲೆಯಾಗಿದೆ. ಅಲ್ಲದೆ, ಆ ದಿನ 1,359 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಲಾಗಿದೆ.
ಕರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಕೆಐಎ ಮೂಲಕ ಪ್ರಯಾಣಿಕರ ಸಂಚಾರಕ್ಕಿಂತ ಸರಕು ಸಾಗಣೆ ಪ್ರಮಾಣ ಹೆಚ್ಚಾಗಿದೆ. ಅದರಂತೆ ತಿಂಗಳಿನಿಂದ ತಿಂಗಳಿಗೆ ಸರಕು ಸಾಗಣೆ ಹೆಚ್ಚುತ್ತಿದ್ದು, ಅಕ್ಟೋಬರ್ ಒಂದೇ ತಿಂಗಳಲ್ಲಿ 34,339 ಮೆಟ್ರಿಕ್ ಟನ್ ಸರಕು ಸಾಗಿಸಲಾಗಿದೆ. ಅದರಲ್ಲಿ 8,117 ಮೆಟ್ರಿಕ್ ಟನ್ ವಿದೇಶಗಳಿಗೆ ಕಳುಹಿಸಿದ್ದಾಗಿದೆ. ಅದರಲ್ಲಿ ಶೇ. 12 ಬೇಗನೆ ಹಾಳಾಗುವಂತಹ ಸರಕುಗಳಾಗಿವೆ. ವಿದೇಶಗಳ ನಗರಗಳ ಪೈಕಿ ಕತಾರ್ ದೇಶದ ದೋಹಾಕ್ಕೆ ಅತಿಹೆಚ್ಚು 1,095 ಮೆಟ್ರಿಕ್ ಟನ್ ಸರಕನ್ನು ಕಳುಹಿಸಲಾಗಿದೆ.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ದ ಮೂಲಕ ಅಕ್ಟೋಬರ್ನಲ್ಲಿ 34 ಸಾವಿರ ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ 26 ತಿಂಗಳಲ್ಲಿ ಇದು ಅತಿಹೆಚ್ಚಿನ ಸರಕಿನ ಪ್ರಮಾಣವಾಗಿದೆ.