ನ್ಯೂಸ್

ಕರೊನಾ ಪೀಡಿತ ದೇಶಗಳಿಂದ ಬಂದ 335 ಜನರು ನಾಪತ್ತೆ!

ಚಂಡೀಗಢ​: ಕರೊನಾ ವೈರಸ್​ ತಡೆಗೆ ಸರ್ಕಾರ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗಿದ್ದರೂ ಬೇರೆ ದೇಶಗಳಿಂದ ಭಾರತಕ್ಕೆ ಬರುತ್ತಿರುವ ಪ್ರಯಾಣಿಕರಿಂದ ಕರೊನಾ ಸಮಸ್ಯೆ ಹೆಚ್ಚುತ್ತಲೇ ಸಾಗಿದೆ. ಪಂಜಾಬ್​ಗೆ ಕರೊನಾ ಪೀಡಿತ ದೇಶಗಳಿಂದ ಸಾವಿರಾರು ಜನರು ಬಂದಿದ್ದು, ಅದರಲ್ಲಿ 335 ಜನರು ವೈದ್ಯಕೀಯ ಪರೀಕ್ಷೆ ನಡೆಸುವುದಕ್ಕೆ ಸಿಕ್ಕಿಲ್ಲ ಎಂದು ಅಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಮಾರ್ಚ್​ 13ರವರೆಗೆ ಪಂಜಾಬ್​ನ ವಿಮಾನ ನಿಲ್ದಾಣಗಳಿಗೆ ಒಟ್ಟು 6,692 ಜನರು ಕರೊನಾ ಪೀಡಿತ ದೇಶಗಳಿಂದ ಬಂದಿಳಿದಿದ್ದಾರೆ. ಈ ಪೈಕಿ 6011 ಜನರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗಿದೆ. ಉಳಿದಂತೆ 353 ಜನರನ್ನು ಜಿಲ್ಲಾ ವೈದ್ಯಕೀಯ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಆದರೆ ಇನ್ನುಳಿದ 335 ಜನರು ವೈದ್ಯಕೀಯ ತಪಾಸಣೆಗೆ ಲಭ್ಯವಾಗಿಲ್ಲ. ಈ ಪ್ರಯಾಣಿಗರು ಎಲ್ಲಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿಲ್ಲ.

ಕರೊನಾ ಪೀಡಿತ ದೇಶಗಳಿಂದ ಬಂದಿರುವ ಪ್ರಯಾಣಿಗರ ಪೈಕಿ 2241 ಪ್ರಯಾಣಿಗರನ್ನು ತಪಾಸಣೆಯಲ್ಲಿಡಲಾಗಿದೆ. ಅದರಲ್ಲಿ ಏಳು ಜನರಲ್ಲಿ ಮಾ.13ರಂದು ಕರೊನಾ ಗುಣಲಕ್ಷಣಗಳು ಕಂಡುಬಂದಿವೆ ಎಂದು ಇಲಾಖೆ ತಿಳಿಸಿದೆ.

ಕರೊನಾ ಪೀಡಿತ ದೇಶಗಳಿಂದ ಪಂಜಾಬ್​ಗೆ ಬಂದು ನಾಪತ್ತೆಯಾಗಿರುವ 335 ಪ್ರಯಾಣಿಗರು ಪಂಜಾಬ್​ನಲ್ಲಿಯೇ ಇದ್ದಾರಾ ಅಥವಾ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದಾರಾ ಎನ್ನುವುದರ ಕುರಿತಾಗಿಯೂ ಯಾವುದೇ ಮಾಹಿತಿ ಇಲ್ಲ. (ಏಜೆನ್ಸೀಸ್​)