Medical Miracle : ಸಾಫ್ಟ್ವೇರ್ ಇಂಜಿನಿಯರಿಂಗ್ ವ್ಯಕ್ತಿಯೊಬ್ಬ ಎರಡು ಬಾರಿ ತಮ್ಮ ಕಾಂಡಕೋಶವನ್ನು ದಾನ ಮಾಡುವ ಮೂಲಕ ಇಬ್ಬರು ಕ್ಯಾನ್ಸರ್ ರೋಗಿಗಳ ಜೀವ ಉಳಿಸಿರುವ ಘಟನೆ ಮುಂಬೈನ ವೈಜಾಗ್ನಲ್ಲಿ ನಡೆದಿದೆ.
ದಾನಿಯನ್ನು ಸತೀಶ್ ಎಂದು ಗುರುತಿಸಲಾಗಿದೆ. ಇವರು 2021 ರಲ್ಲಿ ಭಾರತದಲ್ಲಿರುವ ಒಂದು ರೋಗಿಗೆ ತಮ್ಮ ಕಾಂಡಕೋಶವನ್ನು ದಾನ ಮಾಡಲು ನಿರ್ಧರಿಸಿ ದಾನ ಮಾಡಿದರು. ಇದಾದ ಬಳಿಕ 2023 ರಲ್ಲಿ, ಅವರು ಅಹಮದಾಬಾದ್‌ನಲ್ಲಿ ತಮ್ಮ ಸ್ವೀಕರಿಸುವವರನ್ನು ಭೇಟಿಯಾಗಿ ಜನವರಿ 2025ರಲ್ಲಿ ಎರಡನೇ ಬಾರಿಗೆ ತಮ್ಮ ಕಾಂಡಕೋಶವನ್ನು ದಾನ ಮಾಡಿದ್ದಾರೆ.
ಇದನ್ನೂ ಓದಿ: ಏನು ನಿರೀಕ್ಷಿಸಬೇಕೆಂದು ಗೊತ್ತಿದೆ… ಏಕದಿನ ನಾಯಕತ್ವ ಕಳೆದುಕೊಂಡ ಬಳಿಕ ರೋಹಿತ್ ಮೊದಲ ಪ್ರತಿಕ್ರಿಯೆ! Rohit Sharma
ಇದರ ಬಗ್ಗೆ ಮಾತನಾಡಿದ ಸತೀಶ್ ಕಾಂಡಕೋಶಗಳನ್ನು ದಾನ ಮಾಡುವುದು ಒಂದು ಸಣ್ಣ ಕಾರ್ಯವಾಗಿದ್ದರೂ, ಅವು ದೊಡ್ಡ ಪರಿಣಾಮವನ್ನು ಬೀರುತ್ತವೆ. ನನ್ನ ಹೆತ್ತವರ ಬೆಂಬಲದಿಂದ ನಾನು ಎರಡು ಬಾರಿ ದಾನ ಮಾಡಿದ್ದೇನೆ. ಮತ್ತೊಮ್ಮೆ ಈ ಕಾರ್ಯವನ್ನು ಮಾಡಲು ನಾನು ಸಂತೋಷಡುತ್ತೇನೆ. ಒಂದು ಜೀವವನ್ನು ಉಳಿಸಲು ಸಹಾಯ ಮಾಡಿದ್ದೀರಿ ಎಂದು ತಿಳಿದುಕೊಳ್ಳುವುದಕ್ಕಿಂತ ದೊಡ್ಡ ಪ್ರತಿಫಲ ಇನ್ನೊಂದಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಹೈದ್ರಬಾದ್ನ ಡಿಕೆಎಂಎಸ್ ಫೌಂಡೇಶನ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅಧ್ಯಕ್ಷ ಪ್ಯಾಟ್ರಿಕ್ ಪಾಲ್, ಅರ್ಹ ಭಾರತೀಯ ಜನಸಂಖ್ಯೆಯಲ್ಲಿ ಶೇ.0.09ರಷ್ಟು ಜನರು ಮಾತ್ರ ರಕ್ತ ಕಾಂಡಕೋಶ ದಾನಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ಪ್ರತಿ 5 ನಿಮಿಷಕ್ಕೊಮ್ಮೆ ಯಾರಾದರು ರಕ್ತ ಕ್ಯಾನ್ಸರ್ನಿಂದ ಬಳಲುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಕ್ರಿಕೆಟಿಗನ ಹೆಸರಿನಲ್ಲಿ ಮೋಸ! ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಮಹಿಳೆಯಿಂದ 5 ಲಕ್ಷ ರೂ. ಪಡೆದು ಎಸ್ಕೇಪ್..cheating
ಕಾಂಡಕೋಶವು ಮೂಳೆಗಳ ಒಳಗಿನ ಮೃದು ತಂತುವಾಗಿದ್ದು, ರಕ್ತ ಕೋಶಗಳ ಉತ್ಪಾದನೆಯ ಮೂಲಸ್ಥಾನವಾಗಿದೆ. ಇದು ಪ್ರತಿದಿನ 220 ಬಿಲಿಯನ್‌ಕ್ಕೂ ಹೆಚ್ಚು ಹೊಸ ರಕ್ತ ಕೋಶಗಳನ್ನು ರೂಪಿಸುತ್ತದೆ. ಇದರಲ್ಲಿರುವ ಕೆಂಪು ಕೋಶಗಳು ಆಕ್ಸಿಜನ್ ಸಾಗಿಸುವುದು, ಬಿಳಿ ಕೋಶಗಳು ಸೋಂಕುಗಳನ್ನು ಎದುರಿಸಿ ರೋಗನಿರೋಧಕ ಶಕ್ತಿ ನೀಡುವುದು, ಪ್ಲೇಟ್‌ಲೆಟ್‌ಗಳು ರಕ್ತ ನಿಂತಿಸುವಲ್ಲಿ ಸಹಾಯ ಮಾಡುತ್ತವೆ. ಸ್ಟೆಮ್ ಸೆಲ್‌ಗಳ ಮೂಲಕ ದೇಹದಲ್ಲಿ ರಕ್ತ ಸರಬರಾಜು ಮತ್ತು ಆರೋಗ್ಯವನ್ನು ನಿರ್ವಹಿಸುತ್ತದೆ. (ಏಜೆನ್ಸೀಸ್)