ಬೆಂಗಳೂರು: ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿನ ರಿಷಬ್ ಪತ್ನಿ ಕೂಡಾ ಕಾಣಿಸಿಕೊಂಡಿರುವುದು ಗೊತ್ತಿರುವ ವಿಚಾರ. ಈ ಸಿನಿಮಾದಲ್ಲಿ ಉಟ್ಟಿದ್ದ ಸೀರೆಯೊಂದರ ವಿಶೇಷತೆಯ ಬಗ್ಗೆ ರಿಷಬ್ ಪತ್ನಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದ ಆರಂಭದಲ್ಲಿ ಕಾಣಿಸಿಕೊಳ್ಳುವ ರಾಜನ ಪತ್ನಿ ಅಂದರೆ ರಾಣಿಯ ಪಾತ್ರದಲ್ಲಿ ಪ್ರಗತಿ ಕಾಣಿಸಿಕೊಂಡಿದ್ದರು.ಇದೀಗಾ ರಾಣಿಯ ಪಾತ್ರದಲ್ಲಿ ತಾನು ಉಟ್ಟಿದ್ದ ಸೀರೆಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಸಿನಿಮಾಗಾಗಿ ಯಾವುದೋ ಮಳಿಗೆಯಿಂದ ಖರೀದಿಸಿದ ಸೀರೆಯಲ್ಲ. ಬದಲಾಗಿ ಈ ಸೀರೆಯ 32ವರ್ಷ ಹಳೆಯದ್ದು. 'ನನ್ನ ಅಮ್ಮನ ಮದುವೆಯ ಸೀರೆಯನ್ನು ಮುವ್ವತ್ತೆರೆಡು ವರ್ಷದ ನಂತರ ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿತ್ತು' ರಿಷಬ್ ಪತ್ನಿ ಪ್ರಗತಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.