ನಂಜನಗೂಡು: ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಯ ಪ್ರತೀಕ ಸನ್ನಿಧಾನದಲ್ಲಿ ಆ.31ರಿಂದ ಮೂರು ದಿನ ಆಕ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧಾನ ಮಹೋತ್ಸವ ನಡೆಯಲಿದೆ.
ಆ.31ರಂದು ರಾಘವೇಂದ್ರ ಗುರುಗಳ ಪೂರ್ವಾರಾಧನೆಯೊಂದಿಗೆ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಪ್ರಾತಃಕಾಲ 7ಕ್ಕೆ ಉತ್ಸವರಾಯರಿಗೆ ಪಾದಪೂಜೆ, ಪಂಚಾಮೃತ, ಮಧ್ಯಾಹ್ನ 12ಕ್ಕೆ ಹಸ್ತೋದಕ ಮಹಾಮಂಗಳಾರತಿ ನೆರವೇರಲಿದೆ. ಸೆ.1ರಂದು ಗುರು ಸಾರ್ವಭೌಮರ ಬೃಂದಾವನ ಪ್ರವೇಶ ನಡೆಯಲಿದ್ದು, 352 ವರ್ಷ ಸಂದಿರುವ ಸುದಿನದ ಅಂಗವಾಗಿ ಮಧ್ಯಾರಾಧನೆ ನಡೆಯಲಿದೆ. ಸೆ.2ರಂದು ಗುರುಗಳ ಉತ್ತರಾಧನೆ, ಸೆ.3ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಆರಾಧಾನ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ.31ರಂದು ಸಂಜೆ 6ಕ್ಕೆ ವಿದುಷಿ ಕೋವಿಲಡಿ ಆರ್.ಕಲ ಹಾಗೂ ಅರ್ಚನ ಅವರಿಂದ ದಾಸವಾಣಿ, ಸೆ.1ರಂದು ಸಂಜೆ 6ಕ್ಕೆ ವಿದ್ವಾನ್ ಕೇಶವ್ ಮೋಹನಕುಮಾರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಪಿಟೀಲು ವಾದನ, ಸೆ.2ರಂದು ಸಂಜೆ 6ಕ್ಕೆ ಮೈಸೂರಿನ ವಿದ್ವಾನ್ ಭಾನುಸಿಂಹ ಅವರಿಂದ ದಾಸವಾಣಿ, ಸೆ.3ರಂದು ಸಂಜೆ 6ಕ್ಕೆ ವಿದ್ವಾನ್ ಚಂದನ್‌ಕುಮಾರ್ ಅವರಿಂದ ಕೊಳಲು ವಾದನ ಏರ್ಪಡಿಸಲಾಗಿದೆ ಎಂದು ಮಠದ ವ್ಯವಸ್ಥಾಪಕ ಕೆ.ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.