ಮೈಸೂರು : ಮಣಿಪುರ ಘಟನೆ ಖಂಡಿಸಿ ಆದಿಕರ್ನಾಟಕ ಮಹಾಸಭಾ ವತಿಯಿಂದ ಜು.31 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ಮೂಲಕ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಇದು ಖಂಡನೀಯ. ಇಂತಹ ಘಟನೆಗಳು ನಡೆಯಬಾರದು ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಸರಗೂರು ಶಿವಣ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತಾಲೂಕು ವರ್ತಕರ ಮಂಡಳಿ ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಚೆನ್ನಿಪುರ ಮಲ್ಲೇಶ್, ದಸಂಸ ಸಂಚಾಲಕ ಇಟ್ನ ರಾಜಣ್ಣ, ದಸಂಸ ತಾಲೂಕು ಸಂಚಾಲಕರು ಲಂಕೆ ಲಕ್ಷ್ಮಣ್, ಗ್ರಾಮೀಣ ಮಹೇಶ್, ಭೀಮಯ್ಯ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಇಂದಿಯಪ್ಪ, ಕಂದೇಗಾಲ ನಾಗರಾಜು, ಸುಬ್ರಹ್ಮಣ್ಯ ಇತರರು ಇದ್ದರು.