ಕರ್ನಾಟಕದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿದಿನ ಸರಾಸರಿ 31 ಸಾವು 
ನ್ಯೂಸ್

ಕರ್ನಾಟಕದ ರಸ್ತೆಗಳಲ್ಲಿ ದಿನಕ್ಕೆ 31 ಮಂದಿ ಬಲಿ; 25-35ರ ಯುವಕರೇ ಜವರಾಯನ ಟಾರ್ಗೆಟ್! | Karnataka Road Accidents

2025ರಲ್ಲಿ ಕರ್ನಾಟಕದಲ್ಲಿ 11,408 ಮಾರಣಾಂತಿಕ ರಸ್ತೆ ಅಪಘಾತಗಳು ದಾಖಲಾಗಿವೆ. ಅಂದರೆ, ಪ್ರತಿದಿನ ಸರಾಸರಿ 31 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. ಇನ್ನು ರಾಜ್ಯದ ರಸ್ತೆ ಅಪಘಾತಗಳಲ್ಲಿ ಶೇ.62.68ರಷ್ಟು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೇ ಸಂಭವಿಸಿವೆ.

Karnataka Road Accident Deaths: ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಅದರಲ್ಲೂ 25ರಿಂದ 35 ವರ್ಷದೊಳಗಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಆಕ್ಸಿಡೆಂಟ್​ಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಾಗಾದರೆ, ಈವರೆಗೆ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಎಷ್ಟು?

2025ರಲ್ಲಿ ಕರ್ನಾಟಕದಲ್ಲಿ 11,408 ಮಾರಣಾಂತಿಕ ರಸ್ತೆ ಅಪಘಾತಗಳು ದಾಖಲಾಗಿದ್ದು, ಪ್ರತಿದಿನ ಸರಾಸರಿ 31 ಮಂದಿ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಗಳಲ್ಲಿ ಗಾಯಗೊಂಡವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಇನ್ನು, ರಾಜ್ಯದಲ್ಲಿ ಸಂಭವಿಸಿದ ಒಟ್ಟು ರಸ್ತೆ ಅಪಘಾತಗಳಲ್ಲಿ ಶೇ.62.68ರಷ್ಟು ಅಪಘಾತಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೇ ನಡೆದಿವೆ.

ಅಜಾಗರೂಕ ಚಾಲನೆಯೇ ಆಕ್ಸಿಡೆಂಟ್​ಗೆ ಕಾರಣ?

ಅತಿವೇಗ, ಅಜಾಗರೂಕ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಹಲವು ಕಾರಣಗಳಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲೂ ಹೆದ್ದಾರಿಗಳಲ್ಲಿ ವಾಹನಗಳ ವೇಗ ಹೆಚ್ಚಿರುವುದರಿಂದ ಅಪಘಾತ ಸಂಭವಿಸಿದಾಗ ಗಂಭೀರವಾಗಿ ಗಾಯಗೊಳ್ಳುವ ಅಥವಾ ಪ್ರಾಣ ಕಳೆದುಕೊಳ್ಳುವ ಅಪಾಯವೂ ಹೆಚ್ಚಿರುತ್ತದೆ.

ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳ

ಅಪಘಾತ ಸಾವುಗಳಲ್ಲಿ ಯುವಜನರೇ ಹೆಚ್ಚು

ರಸ್ತೆ ಅಪಘಾತಗಳಲ್ಲಿ 25ರಿಂದ 35 ವರ್ಷದೊಳಗಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ಹಲವು ಕಾರಣಗಳಿಗೆ ಪ್ರತಿದಿನ ವಾಹನಗಳಲ್ಲಿ ಓಡಾಡುವ ಈ ವಯೋಮಾನದವರೇ ಅಪಘಾತಗಳಿಗೆ ಹೆಚ್ಚು ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.

ಬೆಂಗಳೂರಿನಲ್ಲೂ ರಸ್ತೆ ಅಪಘಾತ ಸಾವು ಜಾಸ್ತಿ

ರಾಜಧಾನಿ ಬೆಂಗಳೂರಿನಲ್ಲೂ ರಸ್ತೆ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆ ಆತಂಕ ಮೂಡಿಸಿದೆ. 2025ರಲ್ಲಿ ನಗರದಲ್ಲಿ 891 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಅತಿವೇಗದ ಚಾಲನೆ, ಅಜಾಗರೂಕತೆ ಹಾಗೂ ಸಂಚಾರ ನಿಯಮ ಉಲ್ಲಂಘನೆಗಳು ಆಕ್ಸಿಡೆಂಟ್​ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಇದನ್ನೂ ಓದಿ: ಚೀನಾದ ಹಳೆಯ ಹಬ್ಬಗಳಿಗೆ ಹೊಸ ಮೆರುಗು; ಸಾಂಪ್ರದಾಯಿಕ ಆಚರಣೆಗಳಿಗೆ ಕ್ಸಿ ಜಿನ್‌ಪಿಂಗ್ ಒತ್ತು! | Chinese Culture

ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ವಾಹನ ಸವಾರರು ವೇಗದ ಮಿತಿ ಪಾಲಿಸುವುದು, ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಬಳಸುವುದು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಜತೆಗೆ ಅಪಾಯಕಾರಿ ತಿರುವುಗಳು, ಸರಿಯಾದ ಬೆಳಕಿನ ಕೊರತೆ ಹಾಗೂ ರಸ್ತೆ ವಿನ್ಯಾಸದಲ್ಲಿರುವ ಸಮಸ್ಯೆಗಳನ್ನು ಸರಿಪಡಿಸುವತ್ತವೂ ಗಮನ ಹರಿಸಬೇಕಿದೆ.