Hyderabad: ಕಲಬೆರಕೆ ಸೇಂದಿ ಸೇವಿಸಿದ ಹಿನ್ನೆಲೆಯಲ್ಲಿ ಜುಲೈ 8, ಮಂಗಳವಾರ ಒಟ್ಟು 31 ರೋಗಿಗಳನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ (NIMS)ಗೆ ದಾಖಲಿಸಲಾಗಿದೆ ಎಂದು NIMS ಆಸ್ಪತ್ರೆ ಗುರುವಾರ (ಜು.೧೦) ತಿಳಿಸಿದೆ.
ಇದನ್ನೂ ಓದಿ: ಕರ್ತವ್ಯದಲ್ಲಿರುವ ಮಹಿಳಾ ಪೊಲೀಸ್ ಅಧಿಕಾರಿಗಳು ಇನ್ಮುಂದೆ ಮೇಕಪ್, ಆಭರಣ ಧರಿಸುವಂತಿಲ್ಲ! Bihar Police
ದಾಖಲಾಗಿರುವ 31 ರೋಗಿಗಳಲ್ಲಿ ನಾಲ್ವರು ರೋಗಿಗಳು ಡಯಾಲಿಸಿಸ್ ಬೆಂಬಲದಲ್ಲಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಉಳಿದ 27 ರೋಗಿಗಳ ಸ್ಥಿತಿ ಸ್ಥಿರವಾಗಿದೆ ಎಂದು ನಿಮ್ಸ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
"ಅಗತ್ಯವಿರುವ ಎಲ್ಲಾ ವೈದ್ಯಕೀಯ ಆರೈಕೆಯನ್ನು ಒದಗಿಸಲಾಗುತ್ತಿದೆ. ತಜ್ಞ ಮಲ್ಟಿಸ್ಪೆಷಾಲಿಟಿ ತಂಡವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ" ಎಂದು NIMS ನ ವೈದ್ಯಕೀಯ ಅಧೀಕ್ಷಕರು ಗುರುವಾರ ತಿಳಿಸಿದ್ದಾರೆ. (ಏಜೆನ್ಸೀಸ್)