ನ್ಯೂಸ್

ರೆಸ್ಟೋರೆಂಟ್‌ನಲ್ಲಿ ಅಡುಗೆ ಅನಿಲ ಸ್ಫೋಟ; 31 ಮಂದಿ ಸಾವು, ಏಳು ಮಂದಿಗೆ ಗಂಭೀರ ಗಾಯ

ಚೀನಾ: ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಅಡುಗೆ ಅನಿಲ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದಲ್ಲಿ 31 ಜನರು ಸಾವನ್ನಪ್ಪಿದ್ದರೆ, ಏಳು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.

ಎಲ್ ಪಿಜಿ ಅನಿಲ ಸೋರಿಕೆಯಿಂದಾಗಿ ಯಿಂಚುವಾನ್‌ನ ಕ್ಸಿಂಕಿಂಗ್ ಜಿಲ್ಲೆಯ ಜನನಿಬಿಡ ಬೀದಿಯಲ್ಲಿ ಬುಧವಾರ ರಾತ್ರಿ 8:40 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ 31 ಜನರು ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿ ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಫೋಟದಿಂದಾಗಿ ಸುತ್ತಮುತ್ತಲಿನ ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ. ಸ್ಫೋಟದ ನಂತರ ಗಾಯಗೊಂಡವರ ರಕ್ಷಣೆ ಮತ್ತು ಚಿಕಿತ್ಸೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. 102 ರಕ್ಷಣಾ ಸಿಬ್ಬಂದಿ ಮತ್ತು 20 ವಾಹನಗಳು ಘಟನಾ ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಚೀನಾದ ಡ್ರ್ಯಾಗನ್ ಬೋಟ್ ಉತ್ಸವದ ಎರಡು ದಿನಗಳ ರಜೆಯ ಮುನ್ನಾದಿನದಂದು ಸ್ಫೋಟ ಸಂಭವಿಸಿದೆ. ರೆಸ್ಟೊರೆಂಟ್ ಜನಸಂದಣಿಯಿಂದ ತುಂಬಿತ್ತು ಎಂದು ವರದಿಯಾಗಿದೆ.