ನ್ಯೂಸ್

ಇದು ಜಗತ್ತಿನ ಅತ್ಯಂತ ಹಳೇ ನಾಯಿ; ಗಿನ್ನೆಸ್​ ರೆಕಾರ್ಡ್ಸ್​ನಲ್ಲಿ ಶ್ವಾನ

ನವದೆಹಲಿ: ನಾನಾ ಕಾರಣಕ್ಕೆ ನಾನಾ ಸಂಗತಿಗಳು ಗಿನ್ನೆಸ್​ ರೆಕಾರ್ಡ್ಸ್​ನಲ್ಲಿ ದಾಖಲಾಗುತ್ತವೆ. ಅದೇ ರೀತಿ ಇಲ್ಲೊಂದು ಶ್ವಾನ ಕೂಡ ಗಿನ್ನೆಸ್​ ರೆಕಾರ್ಡ್ಸ್​​ನಲ್ಲಿ ದಾಖಲಾಗಿದೆ. ಆ ಮೂಲಕ ಇದು ಜಗತ್ತಿನ ಅತ್ಯಂತ ಹಳೇ ನಾಯಿ ಎನಿಸಿಕೊಂಡಿದೆ.

ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್​ ತಳಿಯ ಬಾಬಿ ಎಂಬ ಈ ನಾಯಿಗೆ ಸದ್ಯ 30 ವರ್ಷ ವಯಸ್ಸಾಗಿದ್ದು, ಇದು ವಿಶ್ವದ ಅತ್ಯಂತ ವಯಸ್ಕ ನಾಯಿ ಎಂಬ ಕಾರಣಕ್ಕೆ ಗಿನ್ನೆಲೆ ರೆಕಾರ್ಡ್ಸ್​ ಪಟ್ಟಿಗೆ ಸೇರಿದೆ. ಸಾಮಾನ್ಯವಾಗಿ 12ರಿಂದ 14 ವರ್ಷಗಳ ಕಾಲವಷ್ಟೇ ಬದುಕಿರುವ ಈ ನಾಯಿ, 30 ವರ್ಷವಾದರೂ ಜೀವಂತ ಇರುವುದಕ್ಕೆ ದಾಖಲೆ ಎನಿಸಿಕೊಂಡಿದೆ.

ಗಿನ್ನೆಸ್ ವರ್ಲ್ಡ್​ ರೆಕಾರ್ಡ್ಸ್​ ದಾಖಲೆ ಪ್ರಕಾರ 2023ರ ಫೆ. 1ಕ್ಕೆ ಬಾಬಿ 30 ವರ್ಷ 266 ದಿನಗಳ ಜೀವಿತಾವಧಿಯನ್ನು ಪೂರ್ಣಗೊಳಿಸಿದೆ. ಸದ್ಯ ಇದು ಪೋರ್ಚುಗಲ್​ನಲ್ಲಿರುವ ಕೋಸ್ಟ್ ಕುಟುಂಬದಲ್ಲಿದೆ. ಆಸ್ಟ್ರೇಲಿಯನ್​ ಕ್ಯಾಟಲ್​​ ಡಾಗ್ ಬ್ಲ್ಯೂ (1910-1939) 29 ವರ್ಷ 5 ತಿಂಗಳ ಕಾಲ ಬದುಕಿದ್ದು, ಈ ಹಿಂದಿನ ದಾಖಲೆ ಇದರ ಪಾಲಾಗಿತ್ತು. ಅದನ್ನು ಬಾಬಿ ಈಗ ಮುರಿದಿದೆ.